ಯಹೂದಿ ವೈದ್ಯನೊಬ್ಬ ನೀಡಿದ ವಿಷಯುಕ್ತ ಚುಚ್ಚುಮದ್ದಿನಿಂದಾಗಿ ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನ ತಾಯಿ ಸಾವಿಗೆ ಕಾರಣವಾಗಿರುವುದು ಯಹೂದಿಗಳ ಮೇಲೆ ದ್ವೇಷ ಸಾಧಿಸಲು ಕಾರಣ ಎಂದು ನೂತನವಾಗಿ ಬಿಡುಗಡೆಗೊಂಡ ಪುಸ್ತಕವೊಂದರಲ್ಲಿ ಆರೋಪಿಸುವ ಮೂಲಕ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಲೇಖಕ ಜೊಚಿಮ್ ರೈಕರ್ ಬರೆದ ' ಹೌ ವರ್ಲ್ಡ್ ವಾರ್ ಐ ಲೆಡ್ ಟು ದಿ ಹೊಲೊಕೌಸ್ಟ್ " ಪುಸ್ತಕದಲ್ಲಿ, ಹಿಟ್ಲರ್‌ನ ತಾಯಿ ಕ್ಲಾರಾ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವುದು 18ರ ಹರೆಯದ ಅಡಾಲ್ಫ್ ಹಿಟ್ಲರ್ ಮೇಲೆ ಗಂಭೀರ ಪರಿಣಾಮ ಬೀರಿತ್ತು ಎಂದು ಹೇಳಲಾಗಿದೆ.
ಕ್ಲಾರಾಳ ವೈದ್ಯರಾದ ಎಡ್ವರ್ಡ್ ಬ್ಲೋಚ್ ಸ್ಥನ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುತ್ತಿದ್ದರು.ಆದರೆ ಚಿಕಿತ್ಸೆ ವಿಫಲವಾಗಿ 47 ವರ್ಷ ವಯಸ್ಸಿನಲ್ಲಿ ಕ್ಲಾರಾ ಮೃತಳಾದಳು. ಜರ್ಮನ್ ಸರ್ವಾಧಿಕಾರಿ ಹಿಟ್ಲರ್, ಯಹೂದಿ ವೈದ್ಯ ಎಡ್ವರ್ಡ್ ಬ್ಲೋಚ್‌ನನ್ನು ಎಂದಿಗೂ ಕ್ಷಮಿಸಲಿಲ್ಲ ಎಂದು ರೈಕರ್ ದಿ ಟೆಲಿಗ್ರಾಫ್ ಪತ್ರಿಕೆಗೆ ತಿಳಿಸಿದ್ದಾರೆ.
ಜೊಸಫ್ ಗೊಬೆಲ್ಸ್ ಅವರೊಂದಿಗೆ ನಡೆದ ಸಂವಾದದಲ್ಲಿ, ಯಹೂದಿಗಳು ಕ್ಷಯರೋಗವಿದ್ದಂತೆ.ಅದನ್ನು ನಾನು ಗುಣಪಡಿಸುವವನು ಎನ್ನುವುದಾಗಿ ಹಿಟ್ಲರ್ ಹೇಳಿಕೊಳ್ಳುತ್ತಿದ್ದನು ಎಂದು ರೈಕರ್ ಹೇಳಿದ್ದಾರೆ.