ಹಲವು ದೇಶಗಳಲ್ಲಿರುವ ತಮಿಳು ಉಗ್ರರ ಸಂಪತ್ತನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದು, ಅದನ್ನು ದೇಶದ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ನಿರ್ಧರಿಸಿದೆ ಎಂದು ಶ್ರೀಲಂಕಾದ ಪ್ರಧಾನ ಮಂತ್ರಿ ವಿಕ್ರೆಮನಾಯಕೆ ತಿಳಿಸಿದ್ದಾರೆ.
ವಿದೇಶಗಳಲ್ಲಿರುವ ಎಲ್‌ಟಿಟಿಇ ಸಂಪತ್ತಿನ ವಿವರಗಳನ್ನು ಗುಪ್ತಚರದಳದ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಸ್ವತ್ತುಗಳನ್ನು ಲಂಕಾಗೆ ಮರಳಿತರುವ ಪ್ರಯತ್ನ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ವ್ಹಿಫ್ ಜೊಸೆಫ್ ಮಿಚೈಲ್ ಪೆರೆರಾ ಪ್ರಶ್ನೆಗೆ ಪ್ರಧಾನಿ ವಿಕ್ರಮೆನಾಯಕೆ ಸಂಸತ್ತಿನಲ್ಲಿ ಉತ್ತರಿಸಿದ್ದಾರೆ.
ಬಂಧಿತ ಎಲ್‌ಟಿಟಿಇ ನಾಯಕ ಕುಮಾರನ್ ಪದ್ಮನಾಥನ್, ಎಲ್‌ಟಿಟಿಇ ಬ್ಯಾಂಕ್ ದಾಖಲೆ ಹಾಗೂ ಇತರ ಸ್ವತ್ತುಗಳ ಬಗ್ಗೆ ವಿವರಣೆ ನೀಡಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಎಲ್‌ಟಿಟಿಇ ಸಂಗ್ರಹಿಸಿದ ಸ್ವತ್ತು ದೇಶದ ಸ್ವತ್ತಾಗಿರುವುದರಿಂದ, ಅದನ್ನು ರಾಷ್ಟ್ರದ ಅಭಿವೃದ್ಧಿ ಕಾರ್ಯಗಳಿಗೆ ಬಳಸುವ ಅಗತ್ಯವಿದೆ ಎಂದರು.