ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ : ಉಗ್ರರ ದಾಳಿಗೆ ತತ್ತರಿಸಿದ ಶೇ.80ರಷ್ಟು ಜನತೆ (Pakistanis fear | security threats)
Bookmark and Share Feedback Print
 
ಪಾಕಿಸ್ತಾನದ ಶೇ.80 ರಷ್ಟು ಜನತೆ ಮಾರುಕಟ್ಟೆ ಹೋಟೆಲ್‌ಗಳಂತಹ ಸಾರ್ವಜನಿಕ ಸ್ಥಳಗಳಿಗೆ ಭೇಟಿ ಕೊಡಲು ಸುರಕ್ಷತಾ ದೃಷ್ಟಿಯಿಂದಾಗಿ ಮನೆಯಿಂದ ಹೊರಬರುತ್ತಿಲ್ಲ ಎಂದು ಸಮೀಕ್ಷಾ ವರದಿಯೊಂದು ಪ್ರಕಟಿಸಿದೆ.

ಮಾರುಕಟ್ಟೆ ಹೋಟೆಲ್‌ಗಳಿಗೆ ಭೇಟಿ ನೀಡದಿರುವ ಕಾರಣಗಳು ಯಾವ ಮಟ್ಟಿಗೆ ಪ್ರಭಾವಿತವಾಗಿವೆ ಎಂದು ಕೇಳಿದ ಪ್ರಶ್ನೆಗೆ, ಶೇ.36 ರಷ್ಟು ಜನತೆ ಇತ್ತಿಚೆಗೆ ನಡೆದ ದಾಳಿಗಳು ಹೆಚ್ಚು ಆತಂಕಪಡಿಸಿವೆ ಎಂದು ಹೇಳಿದರೇ ಶೇ.44 ರಷ್ಟು ಜನತೆ ಕೆಲ ಮಟ್ಟಿಗೆ ಆತಂಕವಾಗಿದೆ ಎಂದು ತಿಳಿಸಿದ್ದಾರೆ.

ಶೇ.19 ರಷ್ಟು ಜನತೆ, ಉಗ್ರರ ದಾಳಿಗಳ ಘಟನೆಗಳಿಂದ ಮಾರುಕಟ್ಟೆ ಹಾಗೂ ಹೋಟೆಲ್‌ಗಳಿಗೆ ತೆರಳಲು ಯಾವುದೇ ರೀತಿಯ ಹೆದರಿಕೆಯಿಲ್ಲ ಎಂದು ಹೇಳಿದರೇ ಶೇ.1 ರಷ್ಟು ಜನರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಗಾಲ್‌ಅಪ್ ಪಾಕಿಸ್ತಾನ ಫಾರ್ ಗಿಲಾನಿ ರಿಸರ್ಚ್ ಫೌಂಡೇಶನ್‌ ವತಿಯಿಂದ ಸಮೀಕ್ಷಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

ನಗರ ಹಾಗೂ ಪಟ್ಟಣವಾಸಿಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನತೆ, ಭಯೋತ್ಪಾದನೆಯಿಂದ ಹೆಚ್ಚು ಕಂಗಾಲಾಗಿದ್ದಾರೆ ಎಂದು ಸಮೀಕ್ಷಾ ವರದಿಯಿಂದ ತಿಳಿದು ಬಂದಿದೆ.

ಗ್ರಾಮೀಣ ಪ್ರದೇಶದಲ್ಲಿರುವ ಶೇ.83 ರಷ್ಟು ಜನತೆ ಉಗ್ರರ ದಾಳಿಗೆ ಅಥವಾ ಕೆಲ ಘಟನೆಗಳಿಂದ ಭಯಭೀತರಾಗಿದ್ದಾರೆ. ಆದರೆ ಪಟ್ಟಣದ ಶೇ.75 ರಷ್ಟು ಜನತೆ ಉಗ್ರರ ದಾಳಿಯಿಂದ ಆತಂಕಗೊಂಡಿರುವುದಾಗಿ ಹೇಳಿದ್ದಾರೆ.

ನವೆಂಬರ್ ತಿಂಗಳು ನಡೆದ ಸಮೀಕ್ಷೆಯಲ್ಲಿ, ನಗರ ಹಾಗೂ ಪಟ್ಟ ಮತ್ತು ಗ್ರಾಮೀಣ ಭಾಗಗಳ ಸುಮಾರು 3 ಸಾವಿರ ಪುರುಷರು ಹಾಗೂ ಮಹಿಳೆಯರನ್ನು ಪ್ರಶ್ನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ