ಅಫ್ಘಾನಿಸ್ತಾನದಲ್ಲಿರುವ ನ್ಯಾಟೋ ಪಡೆಗಳು ಯಶಸ್ವಿನ ಹತ್ತಿರದಲ್ಲಿವೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಹೇಳಿದ್ದಾರೆ.
42 ರಾಷ್ಟ್ರಗಳು ಹಾಗೂ 170 ಸಿಬ್ಬಂದಿಯನ್ನು ಹೊಂದಿರುವ ನ್ಯಾಟೋ ಸಂಚಾಲಿತ ಅಂತಾರಾಷ್ಟ್ರೀಯ ಭಧ್ರತಾ ಸಹಾಯಹ ದಳದ ಕೇಂದ್ರ ಕಚೇರಿಗೆ ಭೇಟಿ ನೀಡಿದ ಗೇಟ್ಸ್ ನೂತನ ವ್ಯೂಹ ರಚನೆಯಿಂದಾಗಿ ತಾಲಿಬಾನಿಗಳನ್ನು ಹಿಮ್ಮೆಟ್ಟಿಸಲಾಗುವುದು ಎಂದರು.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಅಪ್ಘಾನಿಸ್ತಾನ್‌ನಲ್ಲಿ ತಾಲಿಬಾನಿಗಳ ವಿರುದ್ಧದ ಹೋರಾಟಕ್ಕಾಗಿ 30 ಸಾವಿರ ಹೆಚ್ಚುವರಿ ಪಡೆಗಳನ್ನು ನಿಯೋಜಿಸುವುದಾಗಿ ಹೇಳಿಕೆ ನೀಡಿದ ನಂತರ ಅಮೆರಿಕದ ಹಿರಿಯ ಅಧಿಕಾರಿ ಗೇಟ್ಸ್ ಭೇಟಿ ನೀಡಿದವರಲ್ಲಿ ಮೊದಲಿಗರಾಗಿದ್ದಾರೆ.
ದಕ್ಷಿಣ ಅಫ್ಘಾನಿಸ್ತಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪಡೆಗಳನ್ನು ಕಳುಹಿಸಲು ನಿರ್ಧರಿಸಲಾಗಿತ್ತು. ಆದರೆ ಗೇಟ್ಸ್ ತಾಲಿಬಾನಿಗಳ ಧಾರ್ಮಿಕ ಕೇಂದ್ರವಾದ ಕಂದಹಾರ್‌ಗೆ ಸೇನೆಯನ್ನು ರವಾನಿಸಲು ಯೋಜನೆಯನ್ನು ರೂಪಿಸಿದ್ದರು. ಆದರೆ ಕೆಟ್ಟ ಹವಾಮಾನದಿಂದಾಗಿ ಕೈಬಿಡಲಾಯಿತು.