ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಳ್ಮೆಯನ್ನು ಕಾಯ್ದುಕೊಳ್ಳಲು ಇರಾಕ್ ಪ್ರಧಾನಿ ಕರೆ (Baghdad | bombings | Iraqi PM)
Bookmark and Share Feedback Print
 
ಬಾಗ್ದಾದ್‌ನಲ್ಲಿ ಇತ್ತಿಚೆಗೆ ನಡೆದ ಉಗ್ರರ ದಾಳಿಗಳಿಂದಾಗಿ ಕೆಂಡಾಮಂಡಲವಾದ ವಿರೋಧ ಪಕ್ಷದ ನಾಯಕರು, ಭಧ್ರತಾ ಪಡೆಗಳ ನಾಯಕರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ, ಭಧ್ರತಾ ಪಡೆಗಳೊಂದಿಗೆ ಸಹಕರಿಸುವಂತೆ ಜನತೆಗೆ ಇರಾಕ್‌ ಪ್ರದಾನಿ ಕರೆ ನೀಡಿದ್ದಾರೆ.

ಪ್ರಧಾನಿ ನೂರಿ ಅಲ್-ಮಲಿಕಿ, ಇರಾಕ್ ಜನತೆ ತಾಳ್ಮೆಯನ್ನು ಕಾಯ್ದುಕೊಳ್ಳುವಂತೆ ಸರಕಾರಿ ಸಂಚಾಲಿತ ಟೆಲಿವಿಜನ್‌‌ನಲ್ಲಿ ಜನತೆಗೆ ಸಂದೇಶವನ್ನು ನೀಡಿದ್ದಾರೆ.

ಮಂಗಳವಾರದಂದು ಸರಕಾರಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಸರಣಿ ಬಾಂಬ್‌ ದಾಳಿಯಿಂದಾಗಿ, ಅಲ್-ಮಲಿಕಿ ಮತ್ತು ಉನ್ನತ ಭಧ್ರತಾ ಅಧಿಕಾರಿಗಳು ವಿರೋಧ ಪಕ್ಷಗಳ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

ಜನಪ್ರತಿನಿಧಿಗಳು, ಇರಾಕ್‌ನ ಭಧ್ರತಾ ಪಡೆಯ ಉನ್ನತ ಅಧಿಕಾರಿಗಳು ಸಂಸತ್ತಿನ ಮುಂದೆ ಹಾಜರಾಗಿ ಭಧ್ರತಾ ಪಡೆಗಳ ಸುರಕ್ಷತೆಯ ಮಧ್ಯೆಯು ಉಗ್ರರು ಬಾಂಬ್‌ ಸ್ಫೋಟಿಸಿದ ಕುರಿತು ವಿವರಣೆ ನೀಡುವಂತೆ ಒತ್ತಾಯಿಸಿದ್ದಾರೆ.

ಪ್ರಧಾನಿ ಅಲ್-ಮಲಿಕಿ ಸಂಸತ್ತಿನ ಅಧಿವೇಶನಕ್ಕೆ ಹಾಜರಾಗುವ ನಿರೀಕ್ಷೆಯಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ