ಮಂಗಳವಾರ ಸಂಭವಿಸಿದ ಕಾರ್ ಮತ್ತು ಟ್ರಕ್ ಬಾಂಬ್ ಸ್ಫೋಟದ ಹೊಣೆಯನ್ನು ಅಲ್ ಖಾಯಿದಾ ಹೊತ್ತುಕೊಂಡಿದ್ದು, ಈ ಘಟನೆಯಲ್ಲಿ 127ಮಂದಿ ಬಲಿಯಾಗಿದ್ದರು. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ವರಿಷ್ಠರನ್ನು ಇರಾಕ್ ಪ್ರಧಾನಿ ನೂರಿ ಅಲ್ ಮಲಿಕಿ ಸೇವೆಯಿಂದ ವಜಾಗೊಳಿಸಿದ್ದಾರೆ. ಸಚಿವಾಲಯ ಮತ್ತು ಕೋರ್ಟ್ ಹೌಸ್ ಅನ್ನು ಗುರಿಯಾಗಿರಿಸಿ ನಡೆಸಿದ ಬಾಂಬ್ ಸ್ಫೋಟದ ಹೊಣೆಯನ್ನು ಅಲ್ ಖಾಯಿದಾ ಹೊತ್ತುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.