ವಾಷಿಂಗ್ಟನ್ , ಗುರುವಾರ, 10 ಡಿಸೆಂಬರ್ 2009( 11:00 IST )
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪತ್ನಿ ಮಿಚೆಲೆ ನೊಬೆಲ್ ಪ್ರಶಸ್ತಿ ಸ್ವೀಕರಿಸಲು ನಾರ್ವೆಯ ಒಸ್ಲೊಗೆ ತೆರಳಿದರು ಎಂದು ಶ್ವೇತ ಭವನದ ಮೂಲಗಳು ತಿಳಿಸಿವೆ.
ಮೆರಿಲ್ಯಾಂಡ್‌ನಲ್ಲಿರುವ ಆಂಡ್ರೂಸ್ ಏರ್‌ಫೋರ್ಸ್ ನಿಲ್ದಾಣದಿಂದ ನಾರ್ವೆಯ ರಾಜಧಾನಿ ಒಸ್ಲೊಗೆ ತೆರಳಿದ್ದು, ಇಂದು ಭಾಷಣ ಮಾಡಲಿದ್ದಾರೆ. ಶುಕ್ರವಾರದಂದು ವಾಷಿಂಗ್ಟನ್‌ಗೆ ಮರಳಲಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
ಅಮೆರಿಕ ದೇಶದ ಮುಖ್ಯಸ್ಥರಾಗಿ ಬರಾಕ್ ಒಬಾಮಾ ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಶ್ವೇತಭವನದಲ್ಲಿ ಒಬಾಮಾ ಭಾಷಣವನ್ನು ಸಿದ್ಧಪಡಿಸಲಾಗುತ್ತದೆ ಎಂದು ವಕ್ತಾರ ಫಾವ್‌ರೆವ್ ತಿಳಿಸಿದ್ದಾರೆ.
ಇದಕ್ಕಿಂತ ಮೊದಲು ನೊಬೆಲ್ ಪ್ರಶಸ್ತಿಗಳನ್ನು ಸ್ವೀಕರಿಸಿದ ದಕ್ಷಿಣ ಆಫ್ರಿಕಾದ ನೆಲ್ಸನ್ ಮೆಂಡೆಲಾ ಮತ್ತು ಭಾರತದ ಮದರ್ ಥೇರಾಸಾ ಅವರ ಸಾಲಿಗೆ ಸೇರಿದವರಲ್ಲ ಎಂದು ಅಧ್ಯಕ್ಷ ಬರಾಕ್ ಒಬಾಮಾ ಸ್ಪಷ್ಟಪಡಿಸಿದ್ದಾರೆ.