ವಾಷಿಂಗ್ಟನ್, ಗುರುವಾರ, 10 ಡಿಸೆಂಬರ್ 2009( 12:45 IST )
ಅಮೆರಿಕದ ನಾಗರಿಕರನ್ನು ಶಂಕಿತ ಭಯೋತ್ಪಾದಕರು ಎಂದು ಪಾಕ್ ಸರಣಿಯಾಗಿ ಬಂಧಿಸುತ್ತಿರುವುದು ಕಳವಳ ಮೂಡಿಸಿದೆ.ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಯಲ್ಲಿರುವ ಉಗ್ರರಿಗೆ ತರಬೇತಿ ಮತ್ತು ಮಾರ್ಗದರ್ಶನವನ್ನು ಪಾಕಿಸ್ತಾನ ನೀಡುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹಿಲೆರಿ ಕ್ಲಿಂಟನ್ ಆರೋಪಿಸಿದ್ದಾರೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಉಗ್ರರಿಗೆ ಪಾಕ್ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಿರುವುದು ಸದಾ ಕಳವಳಕ್ಕೆ ಕಾರಣವಾಗಿದೆ ಎಂದು ಹಿಲೆರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದೊಂದಿಗೆ ತೀರಾ ಹತ್ತಿರದಿಂದ ಕಾರ್ಯನಿರ್ವಹಿಸುವ ಅವಕಾಶ ದೊರೆತಿದೆ. ಯುವಕರನ್ನು ನೇಮಕ ಮಾಡಿಕೊಂಡು ಭಯೋತ್ಪಾದನೆಯ ತರಬೇತಿ ನೀಡುತ್ತಿರುವ, ಭಯೋತ್ಪಾದಕರ ಮೂಲಸೌಕರ್ಯಗಳನ್ನು ಬೇರುಸಹಿತ ಕಿತ್ತೊಗೆಯಬೇಕಾಗಿದೆ ಎಂದರು.
ಭಾರತ ಮತ್ತು ಮುಂಬೈ ಮೇಲೆ ಭಯೋತ್ಪಾದನೆಯ ದಾಳಿ ನಡೆಸುವ ಯೋಜನೆ ರೂಪಿಸಿದ ಆರೋಪದ ಮೇಲೆ, ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ತಾನಿ ಮೂಲದ ಅಮೆರಿಕ ನಾಗರಿಕ, ಹೆಡ್ಲಿಯನ್ನು ಎಫ್‌ಬಿಐ ಬಂಧಿಸಿತ್ತು