ಕಾಶ್ಮಿರ ಸಮಸ್ಯೆ ಪರಿಹಾರಕ್ಕೆ ಅಮೆರಿಕ ಮಧ್ಯಸ್ಥಿಕೆ:ಜರ್ದಾರಿ
ವಾಷಿಂಗ್ಟನ್, ಗುರುವಾರ, 10 ಡಿಸೆಂಬರ್ 2009( 16:03 IST )
ಮಧ್ಯಪ್ರಾಚ್ಯ ರಾಷ್ಟ್ರಗಳ ಬಿಕ್ಕಟ್ಟನಿಂತಿರುವ ಕಾಶ್ಮಿರ ಸಮಸ್ಯೆ ಪರಿಹಾರಕ್ಕೆ ಅಮೆರಿಕ ಮಧ್ಯಸ್ಥಿಕೆವಹಿಸಬೇಕು ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿದ್ದಾರೆ.
ಭಾರತ ಕಾಶ್ಮಿರ ಪ್ರದೇಶದಲ್ಲಿ ಅಸ್ಥಿರತೆಯ ಪಾತ್ರವನ್ನು ವಹಿಸುತ್ತಿದ್ದು, ಅಮೆರಿಕದ ಏಕಮುಖಿ ಕೃತಕ ನೀತಿಗಳಿಂದಾಗಿ, ಪಾಕಿಸ್ತಾನದ ಜನತೆಯಲ್ಲಿ ಅಕ್ರೋಶ ಮೂಡಿಸಿದೆ ಎಂದು ಜರ್ದಾರಿ ತಿಳಿಸಿದ್ದಾರೆ.
ಭಾರತಕ್ಕೆ ಸಂಬಂಧಿತ ನೀತಿಗಳಿಂದ ಪ್ರಾದೇಶಿಕ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ.ಪಾಕಿಸ್ತಾನಕ್ಕೆ ಭಾರತ ಬೆಂಬಿಡದೆ ಕಾಡುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್‌ಗೆ ಹೇಳಿಕೆ ನೀಡಿದ್ದಾರೆ.
ಆದರೆ ಕಾಶ್ಮಿರದ ಸಮಸ್ಯೆಯ ಮಧ್ಯೆಯು ಪಾಕಿಸ್ತಾನ ಹೊಂದಾಣಿಕೆ ಮತ್ತು ಶಾಂತಿಯನ್ನು ಬಯಸುತ್ತದೆ. ದೀರ್ಘಾವಧಿಯ ಇತಿಹಾಸ ಹಾಗೂ ನೆರೆಯ ರಾಷ್ಟ್ರದ ಪರಿಹಾರವಾಗದ ಕಾಶ್ಮಿರ ಸಮಸ್ಯೆ, ಪಾಕ್ ನಾಗರಿಕರಲ್ಲಿ ಕಳವಳ ಮೂಡಿಸಿದೆ ಎಂದು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ತಿಳಿಸಿದ್ದಾರೆ.