ವಾಷಿಂಗ್ಟನ್, ಗುರುವಾರ, 10 ಡಿಸೆಂಬರ್ 2009( 17:28 IST )
ಅಮೆರಿಕ ಮೂಲದ ಐವರು ಮುಸ್ಲಿಂ ಯುವಕರನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದ್ದು, ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವಿದೆಯೇ ಹಾಗೂ ಡಿಸೆಂಬರ್ 2001ರಲ್ಲಿ ಭಾರತದ ಸಂಸತ್ತಿನ ಮೇಲೆ ನಡೆದ ದಾಳಿಯಲ್ಲಿ ಭಾಗವಹಿಸಿದ್ದಾರೆಯೇ ಎನ್ನುವ ಕುರಿತಂತೆ ತನಿಖೆ ನಡೆಸಲಾಗುತ್ತಿದೆ.
ವಾಷಿಂಗ್ಟನ್ ಉಪಪಟ್ಟಣದಲ್ಲಿ ವಾಸವಾಗಿದ್ದ ಐವರು ಕಾಲೇಜ್ ಯುವಕರು, ಕಳೆದ ನವೆಂಬರ್‌ನಿಂದ ಕಾಣೆಯಾಗಿರುವ ಹಿನ್ನೆಲೆಯಲ್ಲಿ, ಎಫ್‌ಬಿಐ ಅಧಿಕಾರಿಗಳು ಹುಡುಕಾಟ ನಡೆಸಿದ್ದು, ಪಾಕಿಸ್ತಾನದಲ್ಲಿ ಬಂಧಿತ ಯುವಕರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವಲ್ಲಿ ನಿರತವಾಗಿದೆ.
ಪಾಕಿಸ್ತಾನ ತನಿಖಾ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಅಮೆರಿಕದ ಎಫ್‌ಬಿಐ ಎಜೆಂಟರು, ಬಂಧಿತ ವ್ಯಕ್ತಿಗಳ ವಿವರಗಳನ್ನು ಅವರ ವಹಿವಾಟು ಕುರಿತಂತೆ ಮಾಹಿತಿ ಪಡೆಯುವಂತೆ ಕೋರಲಾಗಿದೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಎಫ್‌ಬಿಐ ಮೂಲಗಳು ತಿಳಿಸಿವೆ.
ಪಾಕಿಸ್ತಾನದಲ್ಲಿ ಐವರು ಅಮೆರಿಕ ಮೂಲದ ಮುಸ್ಲಿಂ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಸಚಿವ ಎಸ್.ಎಂ.ಇಮ್ರಾನ್ ವಾಷಿಂಗ್ಟನ್‌ನಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯಲ್ಲಿ ತಿಳಿಸಿದ್ದಾರೆ.