ಬಾಗ್ದಾದ್ : ಬಾಗ್ದಾದ್‌ನಲ್ಲಿ ಇತ್ತಿಚೆಗೆ ನಡೆದ ಸರಣಿ ಬಾಂಬ್ ದಾಳಿಯಲ್ಲಿ ತಮ್ಮ ಕೈವಾಡವಿರುವುದಾಗಿ ಅಲ್‌ಕೈದಾ ಹೇಳಿಕೆ ನೀಡಿದ ನಂತರ ಪ್ರಧಾನಿ ನೂರಿ ಅಲ್-ಮಲಿಕಿ ಭಧ್ರತಾ ಮುಖ್ಯಸ್ಥನನ್ನು ವಜಾ ಮಾಡಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಮುಸ್ಲಿಂ ಪ್ರತ್ಯೇಕತಾವಾದಿಗಳು ಸಚಿವಾಲಯ ಹಾಗೂ ಇತರ ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆಸಿ 450 ಮಂದಿಯನ್ನು ಗಾಯಗೊಳಿಸಿದ್ದಾರೆ ಎಂದು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಗುರಿಗಳ ಪಟ್ಟಿ ಅಂತ್ಯವಾಗಿಲ್ಲ. ಅಲ್ಲಾನ ಅನುಮತಿಯ ಮೇರೆಗೆ ಮತ್ತಷ್ಟು ದಾಳಿಗಳನ್ನು ನಡೆಸಲಾಗುವುದು ಎಂದು ಅಲ್‌ಕೈದಾ ಹೇಳಿಕೊಂಡಿದೆ.
ಇರಾಕ್‌ನ ಸರ್ವಾಧಿಕಾರಿಯಾಗಿದ್ದ ಸದ್ದಾಂ ಹುಸೇನ್ ಸ್ವಕ್ಷೇತ್ರವಾದ ತಿಕ್ರಿತ್‌ನಲ್ಲಿ ನಡೆಸಿದ ಆತ್ಮಾಹುತಿ ದಾಳಿಯನ್ನು ಹೊಣೆಯನ್ನು ಅಲ್‌ಕೈದಾ ಹೊತ್ತುಕೊಂಡಿದೆ.