ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೊಬೆಲ್ ಶಾಂತಿ ಪ್ರಶಸ್ತಿ ಸ್ವೀಕರಿಸಿದ ಒಬಾಮಾ (Barack Obama | Nobel peace prize | Norway)
Bookmark and Share Feedback Print
 
PTI
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಒಬಾಮಾ, ಅಹಿಂಸೆಯನ್ನು ಪ್ರತಿಪಾದಿಸಿದ ನಾಯಕರಾದ ಮಹಾತ್ಮಾಗಾಂಧಿ ಮತ್ತು ಜ್ಯೂನಿಯರ್ ಮಾರ್ಟಿನ್ ಲೂಥರ್ ಕಿಂಗ್ ತಮಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದ್ದಾರೆ.

ನಾನು ನೊಬೆಲ್ ಪ್ರಶಸ್ತಿಯನ್ನು ತುಂಬಾ ಗೌರವದಿಂದ ಸ್ವೀಕರಿಸುತ್ತಿದ್ದೇನೆ.ಇತರರಿಗೆ ಕೂಡಾ ಇದೇ ರೀತಿಯ ಭಾವನೆಗಳು ಬರುತ್ತಿರಬಹುದು. ನಾರ್ವೆ ಸೇರಿದಂತೆ ಇತರ ರಾಷ್ಟ್ರಗಳು ಬೆಂಬಲಿಸಿದ ಯುದ್ಧ-ವಿರೋಧಿ ನೀತಿಗಳ ಬಗ್ಗೆ ಒಬಾಮಾ ಸಮರ್ಥಿಸಿಕೊಂಡರು.

ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಬಲವರ್ಧನೆ ಮತ್ತು ಶಾಂತಿಗಾಗಿ ಕಾರ್ಯನಿರ್ವಹಿಸುತ್ತಿರುವ ಒಬಾಮಾ ಅವರ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿಲಾಯಿತು.

ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಅಮೆರಿಕದ ಅಧ್ಯಕ್ಷರಲ್ಲಿ ಒಬಾಮಾ ನಾಲ್ಕನೇಯವರು. ಅಣು-ಮುಕ್ತ ವಿಶ್ವವಾಗಿಸಲು ಒಬಾಮ ಅವರ ಪ್ರಯತ್ನವನ್ನು ಪ್ರಶಂಸಿಸಲಾಯಿತು. ಜಾಗತಿಕ ತಾಪಮಾನ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪನೆಗಾಗಿ ನಡೆಸಿದ ಅವಿರತ ಶ್ರಮಕ್ಕೆ ಮೆಚ್ಚಿಗೆ ಸೂಚಿಸಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ