ಮೆಲ್ಬೊರ್ನ್, ಶುಕ್ರವಾರ, 11 ಡಿಸೆಂಬರ್ 2009( 09:23 IST )
ಬ್ರಿಟನ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸುವಲ್ಲಿ ವಿಫಲ ಯತ್ನ ನಡೆಸಿರುವ ಆರೋಪ ಎದುರಿಸಿದ್ದ ಬೆಂಗಳೂರು ವೈದ್ಯ ಮೊಹಮ್ಮದ್ ಹನೀಫ್ ವಕೀಲರಾಗಿದ್ದ ಸ್ಟೀಫನ್ ಕಿಮ್ ಅವರಿಗೆ ಪ್ರಸಕ್ತ ಸಾಲಿನ ಮಾನವ ಹಕ್ಕು ಪದಕ ನೀಡಲಾಗಿದೆ.
ಆಸ್ಟ್ರೇಲಿಯಾದಲ್ಲಿ ಕೈದಿಗಳು, ನಿರಾಶ್ರಿತರು, ಅಂಗವಿಕಲರ ಹಕ್ಕುಗಳನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಕ್ಕಾಗಿ ಮಾನವ ಹಕ್ಕು ಆಯೋಗ ಈ ಪದಕ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಬ್ರಿಟನ್‌ನಲ್ಲಿ ಉಗ್ರಗಾಮಿ ಚಟುವಟಿಕೆ ನಡೆಸುವಲ್ಲಿ ಹನೀಫ್ ಭಾಗಿಯಾಗಿದ್ದಾನೆಂಬ ಆರೋಪ ಜಾಗತಿಕವಾಗಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಅಲ್ಲದೆ, ವೈದ್ಯಕೀಯ ಸೇವೆಯಿಂದ ಕೂಡ ಆಸ್ಟ್ರೇಲಿಯಾ ಸರ್ಕಾರ ಹನೀಫ್‌ನನ್ನು ಸೇವೆಯಿಂದ ವಜಾಗೊಳಿಸಿತ್ತು. ಸಾಕಷ್ಟು ವಿವಾದದ ನಂತರ ನ್ಯಾಯಾಲಯ ಆತನನ್ನು ದೋಷಮುಕ್ತಗೊಳಿಸಿತ್ತು.