ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಮೂವರು ಕರ್ನಲ್ ವಿರುದ್ಧ ಕೋರ್ಟ್ ಮಾರ್ಷಲ್ (BBC | Pakistan | court-martial | military | soldiers)
Bookmark and Share Feedback Print
 
ಶ್ಯಾಮ್ಸ್‌ಸಿ ಏರ್‌ಫೋರ್ಸ್ ನೆಲೆಯಲ್ಲಿ ಭಯೋತ್ಪಾದಕ ಚಟುವಟಿಕೆ ಸಂಚಿಗಾಗಿ ಗೂಢಚಾರಿಕೆ ನಡೆಸಿದ ಆರೋಪದಲ್ಲಿ ಕರ್ನಲ್ ಮತ್ತು ಭದ್ರತಾ ಪಡೆಯ ಮಾಜಿ ಸಿಬ್ಬಂದಿಗಳಿಬ್ಬರ ವಿರುದ್ಧ ಕೋರ್ಟ್ ಮಾರ್ಷಲ್ ನಡೆಸಲು ಪಾಕಿಸ್ತಾನ ಮಿಲಿಟರಿ ಅಧಿಕಾರಿಗಳು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

ಭಯೋತ್ಪಾದನಾ ದಾಳಿ ಸಂಚಿಗೆ ಯೋಜನೆ ರೂಪಿಸಿದ್ದರು ಎಂಬ ಆರೋಪ ಎದುರಿಸುತ್ತಿರುವ ಕರ್ನಲ್ ಶಾಹೀದ್ ಬಶೀರ್, ಏರ್ ಫೋರ್ಸ್ ಮಾಜಿ ಪೈಲಟ್ ನದೀಮ್ ಅಹ್ಮದ್ ಷಾ ಹಾಗೂ ಅವಾಸ್ ಅಲಿ ಖಾನ್ ಕೋರ್ಟ್ ಮಾರ್ಷಲ್ ಎದುರಿಸಲಿದ್ದಾರೆ ಎಂದು ಬಿಬಿಸಿ ಉರ್ದು ವರದಿ ತಿಳಿಸಿದೆ.

ಆರೋಪಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಮೂರು ಮಂದಿಯನ್ನು ಮಿಲಿಟರಿ ಗುಪ್ತಚರ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ಉಗ್ರರ ಪರವಾಗಿ ಗೂಢಚಾರಿಕೆ ನಡೆಸಿದ ಆರೋಪ ಎದುರಿಸುತ್ತಿರುವ ಮೂವರ ವಿರುದ್ಧ ಕೋರ್ಟ್ ಮಾರ್ಷಲ್ ವಿಚಾರಣೆ ನಡೆಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಬಂಧಿತರು ಇದೀಗ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ ಕೋಟ್ಲಿ ಪ್ರದೇಶದಲ್ಲಿರುವ ಆರ್ಮಿ ಕಸ್ಟಡಿಯಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ