ವಾಷಿಂಗ್ಟನ್, ಶುಕ್ರವಾರ, 11 ಡಿಸೆಂಬರ್ 2009( 12:48 IST )
ಪಾಕಿಸ್ತಾನದ ನೆಲೆದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಪಾಕ್ ತೋರಿರುವ ಬದ್ಧತೆ ಬಗ್ಗೆ ಅಮೆರಿಕದ ಕೆಲವು ಸಂಸದರು ಪ್ರಶ್ನಿಸಿದ್ದು, ಉಗ್ರರ ವಿರುದ್ಧದ ಕ್ರಮದ ಬಗ್ಗೆ ಪಾಕ್ ತಲೆಹರಟೆ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪಾಕಿಸ್ತಾನ ಕೇವಲ ಔಪಚಾರಿಕೆ ಮಾತುಗಳನ್ನಷ್ಟೇ ಹೇಳುತ್ತಿದೆ. ಆ ನಿಟ್ಟಿನಲ್ಲಿ ಪಾಕಿಸ್ತಾನ ತಾಲಿಬಾನ್ ಉಗ್ರರನ್ನು ಸದೆಬಡಿಯುವಲ್ಲಿ ನೆರೆವು ನೀಡುತ್ತದೆ ಎಂಬ ಬಗ್ಗೆ ಸಂಶಯ ಹುಟ್ಟುವಂತಾಗಿದೆ ಎಂದು ರಿಪಬ್ಲಿಕ್ ಕಾಂಗ್ರೆಸ್ ಮುಖಂಡ ಟೆಡ್ ಪೊಯೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾಕ್ ಮತ್ತು ಅಫ್ಘಾನ್ ಗಡಿಭಾಗದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆ ತಡೆಗಟ್ಟುವಲ್ಲಿ ಅಮೆರಿಕ ಮತ್ತಷ್ಟು ಸೇನೆಯನ್ನು ಕಳುಹಿಸಿದೆ. ಆದರೆ ಪಾಕ್ ಸರ್ಕಾರವೇ ಸೂಕ್ತವಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದರು.
ಪಾಕಿಸ್ತಾನ ಮತ್ತು ಅಘ್ಘಾನ್ ಗಡಿಭಾಗದಲ್ಲಿ ಉಗ್ರರಿಂದ ನಡೆಯುತ್ತಿರುವ ಭಯೋತ್ಪಾದನೆಯನ್ನು ತಡೆಗಟ್ಟಿ, ಅಲ್ಲಿನ ಜನರಿಗೆ ನೆಮ್ಮದಿ ಬದುಕು ಸಾಗಿಸಲು ಅವಕಾಶ ಕಲ್ಪಿಸಿಕೊಡುವಲ್ಲಿ ಪಾಕ್ ಸರ್ಕಾರ ವಿಫಲವಾಗಿದೆ ಎಂಬುದು ತನ್ನ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.