ವಾಷಿಂಗ್ಟನ್, ಶುಕ್ರವಾರ, 11 ಡಿಸೆಂಬರ್ 2009( 18:51 IST )
ಕಾಶ್ಮೀರ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ತಾನು ಮಧ್ಯಸ್ಥಿಕೆ ವಹಿಸುವುದನ್ನು ತಳ್ಳಿಹಾಕಿರುವ ಅಮೆರಿಕ, ಈ ವಿವಾದವನ್ನು ಭಾರತ ಮತ್ತು ಪಾಕಿಸ್ತಾನದ ನಡುವೆಯೇ ಬಗೆಹರಿಯಬೇಕಾಗಿದೆ ಎಂದು ಹೇಳಿದೆ.
'ಪಾಕಿಸ್ತಾನ ಮತ್ತು ಭಾರತ ನಡುವೆ ಉದ್ಭವಿಸಿರುವ ಕಾಶ್ಮೀರ ಸಮಸ್ಯೆಯ ಅಗತ್ಯತೆ ನಮಗೆ ತಿಳಿದಿದೆ. ಈ ಬಗ್ಗೆ ನಾವು ಎರಡು ದೇಶಗಳ ನಡುವೆ ಚರ್ಚೆ ನಡೆಸಬಹುದಷ್ಟೇ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಪಿ.ಜೆ.ಕ್ರೌಲೆ ತಿಳಿಸಿದ್ದಾರೆ.
ಆದರೆ ಕಾಶ್ಮೀರ ಸಮಸ್ಯೆ ವಿವಾದ ಬಗೆಹರಿಸುವಲ್ಲಿ ಅಂತಿಮವಾಗಿ ಭಾರತ ಮತ್ತು ಪಾಕಿಸ್ತಾನವೇ ಮುಂದಾಗಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಮಧ್ಯೆ ತಲೆದೋರಿರುವ ಕಾಶ್ಮೀರ ವಿವಾದ ಕುರಿತಂತೆ ಅವರನ್ನು ಪ್ರಶ್ನಿಸಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಕಾಶ್ಮೀರ ವಿವಾದ ಇತ್ಯರ್ಥಗೊಳಿಸುವಲ್ಲಿ ಅಮೆರಿಕ ಪ್ರಮುಖ ಪಾತ್ರವಹಿಸಲಿದೆಯೇ ಎಂಬುದಕ್ಕೆ ಈ ಬಗ್ಗೆ ತಮಗೆ ಸ್ಪಷ್ಟವಾಗಿ ಏನೂ ತಿಳಿದಿಲ್ಲ ಎಂದು ಹೇಳಿದರು.