ಸ್ಟಾಕ್ಹೋಮ್, ಶುಕ್ರವಾರ, 11 ಡಿಸೆಂಬರ್ 2009( 19:15 IST )
ಪ್ರಸಕ್ತ ಸಾಲಿನಲ್ಲಿ ಆಯ್ಕೆಯಾದ ನೊಬೆಲ್ ಪ್ರಶಸ್ತಿ ಪಟ್ಟಿಯಲ್ಲಿ ತಮಿಳುನಾಡು ಮೂಲದ ವೆಂಕಟರಮಣ ರಾಮಕೃಷ್ಣನ್ ಅವರು ರಸಾಯನಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಗುರುವಾರ ಸ್ಟಾಕ್‌ಹೋಮ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ವೆಂಕಟರಮಣ ಅವರು ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಾಹಿತ್ಯ, ಇಕಾನಾಮಿಕ್ಸ್, ಭೌತಶಾಸ್ತ್ರ ಮತ್ತು ಮೆಡಿಸಿನ್ ವಿಭಾಗಗಳಲ್ಲಿಯೂ ಸ್ವೀಡಿಸ್ ಕಿಂಗ್ ಗುಸ್ಟಾಫ್ ಅವರಿಂದ ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಅಲ್ಲದೆ, ಈ ಸಾಲಿನಲ್ಲಿ ಐದು ಮಂದಿ ಮಹಿಳೆಯರೂ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದರು.
1952ರಲ್ಲಿ ತಮಿಳುನಾಡಿನ ಚಿದಂಬರಂನಲ್ಲಿ ವೆಂಕಟರಮಣ ಅವರು ಜನಿಸಿದ್ದರು. ಹಿರಿಯ ವಿಜ್ಞಾನಿ ಆಗಿದ್ದಾರೆ. ರಾಮಕೃಷ್ಣ ಅವರೊಂದಿಗೆ ಅಮೆರಿಕದ ಥೋಮಸ್ ಇ ಸ್ಟೇಟಿಜ್ ಮತ್ತು ಇಸ್ರೇಲ್‌ನ ಅಡಾ ಇ ಯೋನಾಥ್ ನೊಬೆಲ್ ಪ್ರಶಸ್ತಿಯನ್ನು ಹಂಚಿಕೆಯೊಂದಿಗೆ ಪಡೆದಿದ್ದರು.
ತಮಿಳುನಾಡು ಮೂಲದ ರಾಮಕೃಷ್ಣನ್ ಅವರು 1971ರಲ್ಲಿ ಬರೋಡಾ ಯೂನಿರ್ವಸಿಟಿಯಿಂದ ಬಿಎಸ್ಸಿ ಪದವಿ ಪಡೆದಿದ್ದರು. ನಂತರ 1976ರಲ್ಲಿ ಓಹಿಯೋ ಯೂನಿರ್ವಸಿಟಿಯಿಂದ ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದರು.