ವಾಣಿಜ್ಯ ನಗರಿ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆ ತುಂಬಾ ಅಪಾಯಕಾರಿ ಸಂಘಟನೆ ಎಂಬುದು ಸಾಬೀತಾಗಿದೆ ಎಂದು ಅಮೆರಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಪಾಯಕಾರಿಯಾಗಿ ಬೆಳೆದಿರುವ ಉಗ್ರಗಾಮಿ ಸಂಘಟನೆಗಳ ಚಟುವಟಿಕೆಗಳ ಬಗ್ಗೆ ವಿಶ್ವ ಸಮುದಾಯ ತುಂಬಾ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಕೂಡ ಈ ಸಂದರ್ಭದಲ್ಲಿ ಸಲಹೆ ನೀಡಿದೆ.
ಲಷ್ಕರ್ ಎ ತೊಯ್ಬಾ ತುಂಬಾ ಅಪಾಯಕಾರಿ ಉಗ್ರಗಾಮಿ ಸಂಘಟನೆಯಾಗಿದೆ. ಆ ಬಗ್ಗೆ ಮುಂಬೈ ಮೇಲೆ ಅದು ನಡೆಸಿದ ಭಯೋತ್ಪಾದಕ ದಾಳಿಯೇ ಸಾಕ್ಷಿಯಾಗಿದೆ ಎಂದಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಐಯಾನ್ ಕೆಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ತಾಲಿಬಾನ್ ಮತ್ತು ಅಲ್ ಖಾಯಿದಾದಂತಹ ಉಗ್ರಗಾಮಿ ಸಂಘಟನೆಗಳನ್ನು ಮಟ್ಟಹಾಕುವಲ್ಲಿ ಜಾಗತಿಕವಾಗಿ ಸಮರ ಸಾರಬೇಕಿದೆ ಎಂದ ಅವರು, ಪಾಕ್ ಮತ್ತು ಅಫ್ಘಾನಿಸ್ತಾನಗಳಲ್ಲಿ ನೆಲೆ ಬಿಟ್ಟಿರುವ ಅವುಗಳನ್ನು ಬೇರು ಸಹಿತ ಕಿತ್ತುಹಾಬೇಕಿದೆ ಎಂದು ಹೇಳಿದರು.