ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಶ್ವಸಂಸ್ಥೆ ಕಚೇರಿ ಮೇಲೆ ಉಗ್ರರ ದಾಳಿ ಹೆಚ್ಚಿದೆ: ಬಾನ್ (Afghanistan | Pakistan | UN | Terrorists | Ban Ki-moon)
Bookmark and Share Feedback Print
 
ಉಗ್ರಗಾಮಿ ಸಂಘಟನೆಗಳ ವಕ್ರ ದೃಷ್ಟಿ ಇದೀಗ ವಿಶ್ವ ಸಂಸ್ಥೆಯ ಮೇಲೆ ಬಿದ್ದಿರುವುದಾಗಿ ವಿಶ್ವಸಂಸ್ಥೆ ಪ್ರದಾನ ಕಾರ್ಯದರ್ಶಿ ಬಾಕ್ ಕಿ ಮೂನ್ ಆತಂಕ ವ್ಯಕ್ತಪಡಿಸಿದ್ದಾರೆ.

2007ರಲ್ಲಿ ಅಲ್ಜಿರಿಯಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದ 15ಮಂದಿ ವಿಶ್ವಸಂಸ್ಥೆ ಸಿಬ್ಬಂದಿಗಳಿಗೆ ಸಂತಾಪ ಸೂಚಿಸಿದ ಬಳಿಕ ಮಾತನಾಡಿದ ಅವರು, ಇತ್ತೀಚೆಗಿನ ವರ್ಷಗಳಲ್ಲಿ ಉಗ್ರರು ವಿಶ್ವಸಂಸ್ಥೆಯ ಮೇಲೆ ಹೆಚ್ಚು ದಾಳಿ ಮಾಡುವ ಗುರಿ ಹೊಂದಿದೆ ಎಂದರು.

ಎರಡು ವರ್ಷದ ಅಲ್ಜಿರಿಯಾದಲ್ಲಿನ ವಿಶ್ವಸಂಸ್ಥೆ ಕಚೇರಿ ಮೇಲೆ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ 15ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, 2003ರಲ್ಲಿ ಬಾಗ್ದಾದ್‌ನಲ್ಲಿರುವ ವಿಶ್ವಸಂಸ್ಥೆ ಕಚೇರಿ ಮೇಲೆ ದಾಳಿ ನಡೆಸಿದ ಪರಿಣಾಮ 22ಮಂದಿ ಸಿಬ್ಬಂದಿಗಳು ಬಲಿಯಾಗಿದ್ದರು ಎಂದರು.

ಅದೇ ರೀತಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ಕಚೇರಿಗಳ ಮೇಲೂ ಉಗ್ರರು ದಾಳಿ ನಡೆಸುವ ಮೂಲಕ ವಿಶ್ವಸಂಸ್ಥೆ ಕೂಡ ತಮ್ಮ ದಾಳಿಯ ಗುರಿ ಎಂದು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ