ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಧಾರ್ಮಿಕ ಚಿಹ್ನೆಗಳೊಂದಿಗೆ ಸಿಖ್ ನೌಕರ ಸೇನೆಗೆ (Sikhs | America | Army | Rattan)
Bookmark and Share Feedback Print
 
ಅಮೆರಿಕದಲ್ಲಿ ಸಿಖ್ಖರ ಅಭಿಯಾನದ ಹಿನ್ನೆಲೆಯಲ್ಲಿ ಅಮೆರಿಕದ ಸೇನೆ ಇನ್ನೊಬ್ಬ ಸಿಖ್ ನೌಕರರನ್ನು ಸಕ್ರಿಯ ಕರ್ತವ್ಯಕ್ಕೆ ಅವರ ಧಾರ್ಮಿಕ ಚಿಹ್ನೆಗಳೊಂದಿಗೆ ಸೇರಿಸಿಕೊಂಡಿದೆ. ಸುಮಾರು 23 ವರ್ಷಗಳಲ್ಲಿ ಸಿಖ್ಖರು ಇದೇ ಮೊದಲ ಬಾರಿಗೆ ಅಮೆರಿಕದ ಸೇನೆಯಲ್ಲಿ ಪೇಟ ಮತ್ತು ಕತ್ತರಿಸದಿರುವ ಕೂದಲಿನೊಂದಿಗೆ ಸೇವೆ ಸಲ್ಲಿಸಲಿದ್ದಾರೆ.

ಈ ವರ್ಷಾರಂಭದಲ್ಲಿ ದಂತವೈದ್ಯ ಕ್ಯಾಪ್ಟನ್ ತೇಜ್‌ದೀಪ್ ಸಿಂಗ್ ರತನ್ ಮತ್ತು ವೈದ್ಯ ಕ್ಯಾಪ್ಟನ್ ಕಮಲ್‌ಜಿತ್ ಸಿಂಗ್ ಕಾಲ್ಸಿ ಅವರು ಸಕ್ರಿಯ ಸೇವೆಗೆ ಸೇರುವುದಕ್ಕೆ ಅವಕಾಶ ನೀಡಲು ಪೇಟಗಳನ್ನು ತೆಗೆದು ಕೂದಲನ್ನು ಕತ್ತರಿಸಬೇಕೆಂದು ಸೇನೆ ಆದೇಶ ನೀಡಿತ್ತು. ಅವರ ಮಿಲಿಟರಿ ಸೇವೆಗೆ ಪ್ರತಿಯಾಗಿ ವೈದ್ಯಕೀಯ ಶಿಕ್ಷಣಕ್ಕೆ ಆರ್ಥಿಕನೆರವು ನೀಡುವ ಸೇನಾ ಕಾರ್ಯಕ್ರಮವನ್ನು ಇಬ್ಬರು ಸಿಖ್ಖರು ಈಗತಾನೇ ಮುಗಿಸಿದ್ದರು.

ಆದರೆ ಪೇಟ ತೆಗೆದು, ಕೂದಲನ್ನು ಕತ್ತರಿಸಬೇಕೆಂಬ ಸೇನೆ ಆದೇಶವನ್ನು ಇಬ್ಬರು ನಿರಾಕರಿಸಿದ ಬಳಿಕ ಸಿಖ್ ಸಮುದಾಯದಿಂದ ಪ್ರತಿಭಟನೆಗಳು ಹೊರಹೊಮ್ಮಿದ್ದವು. ಸಿಖ್ ಸಂಘಟನೆಗಳು ವೈಸಾಕಿ ದಿನದಂದು ಸಹಿ ಮತ್ತು ಅಭಿಯಾನ ಆರಂಭಿಸಿದ ಬಳಿಕ ಅಮೆರಿಕದ ಸೇನೆಯು ಕ್ಯಾಪ್ಟನ್ ಕಾಲ್ಸಿ ಅವರನ್ನು ಪೇಟದ ಸಮೇತ ಕೆಲಸ ಮಾಡಲು ಅನುಮತಿ ನೀಡಿತ್ತು. ಈಗ ಕ್ಯಾಪ್ಟನ್ ರತನ್ ಅವರನ್ನು ಕೂಡ ಸೇನೆಗೆ ಮರುಸೇರ್ಪಡೆ ಮಾಡಲು ಸೇನೆ ನಿರ್ಧರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೆರಿಕ, ಸಿಖ್, ಅಮೆರಿಕ, ಮಿಲಿಟರಿ