ಸರಗೋಧಾ, ಪಾಕಿಸ್ತಾನ್: ಆಫ್ಘಾನಿಸ್ತಾನಕ್ಕೆ ತೆರಳಿ ಅಮೆರಿಕ ನೇತೃತ್ವದ ಪಡೆಗಳ ವಿರುದ್ಧ ಹೋರಾಟ ಮಾಡಲು ಬಯಸಿರುವ ಐವರು ಯುವ ಅಮೆರಿಕನ್ ಮುಸ್ಲಿಮರನ್ನು ಅಮೆರಿಕ ಎಫ್‌ಬಿಐ ಏಜಂಟರು ಮತ್ತು ಅವರ ಪಾಕಿಸ್ತಾನಿ ಸಹೋದ್ಯೋಗಿಗಳು ಶುಕ್ರವಾರ ತನಿಖೆ ಮಾಡಿದರು ಎಂದು ಪಾಕಿಸ್ತಾನಿ ಅಧಿಕಾರಿಗಳು ಹೇಳಿದ್ದಾರೆ.
ಮುಸ್ಲಿಂ ರಾಷ್ಟ್ರಗಳಿಗೆ ಸೇರಿದ ವಲಸೆಗಾರರ ಮಕ್ಕಳು ಇಸ್ಲಾಮಿಕ್ ಭಯೋತ್ಪಾದನೆಗೆ ಸೆಳೆಯಲ್ಪಟ್ಟಿದ್ದಾರೆ ಮತ್ತು ಇಂಟರ್‌ನೆಟ್‌ನಿಂದ ಈ ಪ್ರಕ್ರಿಯೆ ಸುಲಭವಾಗಿದೆಯೆನ್ನುವುದು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಯದ ವಾತಾವರಣವನ್ನು ಮೂಡಿಸಿದೆ. 20ರ ಹರೆಯದ ಉತ್ತರ ವಿರ್ಜಿನಿಯದ ಐವರು ವಿದ್ಯಾರ್ಥಿಗಳನ್ನು ಪಾಕಿಸ್ತಾನ ರಾಜಧಾನಿಯ ಆಗ್ನೇಯಕ್ಕೆ 190 ಕಿಮೀ ದೂರದ ಪಂಜಾಬ್ ಪ್ರಾಂತ್ಯದ ಸರಗೋಧಾ ನಗರದಲ್ಲಿ ಈ ವಾರ ಬಂಧಿಸಲಾಯಿತು.
ಉಗ್ರಗಾಮಿಗಳ ವಿರುದ್ಧ ಈ ಪ್ರಕರಣವು ಅಣ್ವಸ್ತ್ರ ಸಜ್ಜಿತ ಪಾಕಿಸ್ತಾನ ಉಗ್ರಗಾಮಿಗಳ ವಿರುದ್ಧ ಹೋರಾಟ ಕುರಿತ ಸಾಧನೆ ಮೇಲೆ ಗಮನಸೆಳೆದಿದೆ. ಆಫ್ಘಾನಿಸ್ತಾನದ ಅಮೆರಿಕ ನೇತೃತ್ವದ ಪಡೆಗಳ ಮೇಲೆ ದಾಳಿ ಮಾಡಲು ಗಡಿದಾಟಿ ಬರುವ ಇಸ್ಲಾಮಿಕ್ ಹೋರಾಟಗಾರರ ಮೂಲೋತ್ಪಾಟನೆಗೆ ವಾಷಿಂಗ್ಟನ್ ಇಸ್ಲಾಮಾಬಾದ್ ಮೇಲೆ ಒತ್ತಡ ಹೇರಿತ್ತು.