ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯ ಮ‌ೂಲದ ಅಮೆರಿಕನ್ನನಿಗೆ 21 ವರ್ಷ ಜೈಲು (Teller | Bank robbery | Sukhu | US court)
Bookmark and Share Feedback Print
 
2008ರಲ್ಲಿ ಸಂಭವಿಸಿದ ಸಶಸ್ತ್ರ ಬ್ಯಾಂಕ್ ದರೋಡೆಗೆ ಸಂಬಂಧಿಸಿದಂತೆ, ಭಾರತೀಯ ಮ‌ೂಲದ ಅಮೆರಿಕ ಪೌರನಿಗೆ ಕೋರ್ಟ್ 21 ವರ್ಷ 3 ತಿಂಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ. ಈ ಸಂದರ್ಭದಲ್ಲಿ ಅವನು ಬ್ಯಾಂಕ್ ಟೆಲ್ಲರ್‌ ಕೈಗೆ ಗುಂಡು ಹಾರಿಸಿ ತನ್ನ ಇಬ್ಬರು ಸಹಚರರ ಜತೆ 23,471 ಅಮೆರಿಕದ ಡಾಲರ್ ದೋಚಿದ್ದನು. ಗುಂಡುಹಾರಿಸಿದ್ದರಿಂದ ಮಹಿಳಾ ಬ್ಯಾಂಕ್ ಟೆಲ್ಲರ್ ಕಾಯಂ ಗಾಯಕ್ಕೆ ಗುರಿಯಾಗಿದ್ದಳು.

43 ವರ್ಷ ವಯಸ್ಸಿನ ಅನಿರುದ್ ಲಖನ್ ಸುಖು ವಿರುದ್ಧ ತೀರ್ಪನ್ನು ಮೆರಿಲ್ಯಾಂಡ್ ಕೋರ್ಟ್ ಶುಕ್ರವಾರ ನೀಡಿದೆ. 21 ವರ್ಷಗಳು ಮತ್ತು 3 ತಿಂಗಳ ಕಾರಾಗೃಹಶಿಕ್ಷೆ ಬಳಿಕ ಅವನನ್ನು ನಾಲ್ಕು ವರ್ಷಗಳ ಕಾಲ ಮೇಲುಸ್ತುವಾರಿಯ ಬಿಡುಗಡೆ ಮಾಡಲಾಗುವುದು ಎಂದು ಮೆರಿಲ್ಯಾಂಡ್ ಜಿಲ್ಲೆಯ ಅಮೆರಿಕ ಅಟಾರ್ನಿ ರಾಜ್ ಜೆ ರೋಸೆಂಟೈನ್ ತಿಳಿಸಿದ್ದಾರೆ.

ಸುಖು ಅವರು, ಇಬ್ಬರು ಪಿತೂರಿಕೋರರಾದ ಶರ್ಮನ್ ಸೆಡ್ ಮತ್ತು ಓಮರ್ ಬರ್ನೆಟ್ ಅವರ ಜತೆ ನ.20, 2008ರಂದು ಸಂಚು ರೂಪಿಸಿ, ಮೆರಿಲ್ಯಾಂಡ್ ಕ್ಲಾರ್ಕ್ಸ್‌ವಿಲ್ಲೆಯ ಟೆನ್ ಓಕ್ಸ್ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಅಮೆರಿಕವನ್ನು ದರೋಡೆ ಮಾಡಲು ಯೋಜಿಸಿದರು. ಅದೇ ದಿನ ಬೆಳಿಗ್ಗೆ, ದರೋಡೆಕೋರರು ಸುಕುನ ಪಿಕ್‌ಅಪ್ ಟ್ರಕ್‌ನಲ್ಲಿ ಬ್ಯಾಂಕ್‌ಗೆ ತೆರಳಿ, ಬಂದೂಕುಗಳನ್ನು ಝಳುಪಿಸುತ್ತಾ ಒಳಕ್ಕೆ ಪ್ರವೇಶಿಸಿದರು.

ಬರ್ನೆಟ್ ತನ್ನ ಪಿಸ್ತೂಲನ್ನು ಝುಳುಪಿಸಿ, ಕೌಂಟರ್‌ಗೆ ತೆರಳಿ, ಟೆಲ್ಲರ್ಸ್‌ಗಳಿಗೆ ಹಣ ನೀಡುವಂತೆ ಒತ್ತಾಯಿಸಿದ. ಸುಖು 12 ಗೇಜ್ ಶಾಟ್‌ಗನ್‌‍ನಿಂದ ಸಜ್ಜಿತನಾಗಿ, ಬ್ಯಾಂಕ್‌ನ ಮಹಿಳಾ ಸಿಬ್ಬಂದಿ ಅಡಗಿದ್ದ ಕಚೇರಿಯನ್ನು ಪ್ರವೇಶಿಸಿ ಮಹಿಳೆಯನ್ನು ಆಚೆ ಬರುವಂತೆ ಒತ್ತಾಯಿಸಿದ. ಮಹಿಳೆ ಕದಲಿದಾಗ, ಸುಖು ಗುಂಡುಹಾರಿಸಿದಾಗ ಆಕೆಗೆ ಕಾಯಂ ಗಾಯವುಂಟಾಗಿದೆಯೆಂದು ತಿಳಿದುಬಂದಿದೆ.

ಸುಖು ಕೌಂಟರ್‌ಗೆ ತೆರಳಿ ಟೆಲ್ಲರ್‌ಗಳಿಂದ ಹಣ ಕಸಿದುಕೊಂಡು ಕೆಂಪು ಮತ್ತು ಕಪ್ಪು ಚೀಲಗಳಲ್ಲಿ ತುರುಕಿದ್ದನು. ಸೆಡ್ ಮುಂಬಾಗಿಲಿನಲ್ಲಿ ಉಳಿದು, ಕೈಯಲ್ಲಿ ಪಿಸ್ತೂಲು ಹಿಡಿದು ಹೊರಗೆ ಪಹರೆ ಕಾಯುತ್ತಿದ್ದ, ದರೋಡೆಕೋರರು 23,471 ಡಾಲರ್ ಅಪಹರಿಸಿ ಟ್ರಕ್‌ನಲ್ಲಿ ಪರಾರಿಯಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ