ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಮುಂಬೈ ದಾಳಿಯಿಂದ ಲಷ್ಕರೆ ಅಪಾಯ ರುಜುವಾತು' (Mumbai terror | LeT | Pakistan | US)
Bookmark and Share Feedback Print
 
ಪಾಕಿಸ್ತಾನ ಮ‌ೂಲದ ಎಲ್‌ಇಟಿ ಅತಿಯಾದ ಅಪಾಯಕಾರಿ ಸಂಘಟನೆಯೆಂಬುದನ್ನು 26/11 ಮುಂಬೈ ಭಯೋತ್ಪಾದನೆ ದಾಳಿ ತೋರಿಸಿದೆಯೆಂದು ಅಮೆರಿಕ ತಿಳಿಸಿದೆ. ಲಷ್ಕರೆ ತೊಯ್ಬಾದ ಭಯೋತ್ಪಾದನೆ ಚಟುವಟಿಕೆಗಳ ಬಗ್ಗೆ ಗಂಭೀರ ಪ್ರಯತ್ನಗಳನ್ನು ಕೈಗೊಳ್ಳುವಂತೆ ಅಮೆರಿಕವು ವಿಶ್ವಸಮುದಾಯಕ್ಕೆ ಕೋರಿದೆ.

ಲಷ್ಕರೆ ತೊಯ್ಬಾ ತೀರಾ ಅಪಾಯಕಾರಿ ಸಂಘಟನೆಯಾಗಿದ್ದು, ಮುಂಬೈನ ವಿದ್ಯಮಾನಗಳು ಅದನ್ನು ರುಜುವಾತು ಮಾಡಿವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಐಯಾನ್ ಕೆಲ್ಲಿ ವರದಿಗಾರರಿಗೆ ತಿಳಿಸಿದರು.ಗಡಿಯಾಚೆಗಳಲ್ಲಿ ಕಾರ್ಯಾಚರಣೆ ನಡೆಸಲು ಲಷ್ಕರೆ ತೊಯ್ಬಾ ಇಚ್ಛಿಸಿದ್ದು, ಅದನ್ನು ಅತ್ಯಂತ ಅಪಾಯಕಾರಿ ಸಂಘಟನೆಯನ್ನಾಗಿ ಮಾಡಿದೆ.

ಇಡೀ ಅಂತಾರಾಷ್ಟ್ರೀಯ ಸಮುದಾಯ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ ಮ‌ೂಲದ ಭಯೋತ್ಪಾದಕ ಸಂಘಟನೆಗಳಾದ ಎಲ್‌ಇಟಿ ಮತ್ತು ಜೈಷೆ ಮೊಹಮದ್ ಕೆಲವು ಅಮೆರಿಕದ ಯುವಕರ ಹೃದಯಗಳು ಮತ್ತು ಮನಸ್ಸುಗಳನ್ನು ಗೆಲ್ಲಲು ಯತ್ನಿಸುತ್ತಿರುವುದು ಕಳವಳದ ವಿಷಯ ಎಂದು ಹೇಳಿದ್ದಾರೆ. ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ.

ಸಂಘಟಿತ ಅಂತಾರಾಷ್ಟ್ರೀಯ ಕ್ರಮ ಕೈಗೊಳ್ಳುವ ಅಗತ್ಯವನ್ನು ಇದು ಬೆಟ್ಟು ಮಾಡುತ್ತದೆ. ಆಧುನಿಕ ತಂತ್ರಜ್ಞಾನದ ಕಾರಣದಿಂದ ಹತ್ಯಾಕಾರಿ ಸಂದೇಶಗಳನ್ನು ಹೊಂದಿದ ಈ ರೀತಿಯ ಸಂಘಟನೆಗಳು ವಿಶ್ವಾದ್ಯಂತ ಎಲ್ಲಿ ಬೇಕಾದರೂ ತಮ್ಮ ಅಭಿಪ್ರಾಯಗಳನ್ನು ಸಾರಬಹುದು ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ