ನೇಪಾಳದ ತೆರೈ ಪ್ರದೇಶದ ಧನುಶ್ ಜಿಲ್ಲೆಯಲ್ಲಿ ಕಳೆದ ತಿಂಗಳು ರಾಮ್ ಮತ್ತು ಜಾನಕಿ ವಿವಾಹಕ್ಕೆ ಹತ್ತಾರು ಸಾವಿರ ಯಾತ್ರಾರ್ಥಿಗಳು ಆಗಮಿಸಿದ್ದರು. ಆದರೆ ಇಂದು ದಕ್ಷಿಣ ನೆರೆಯ ಪ್ರದೇಶದಿಂದ ಇನ್ನೊಬ್ಬ ಪ್ರವಾಸಿಯು ಆಗಮಿಸುವ ಭಯದಲ್ಲಿ ಧನುಶ್ ಸಿಲುಕಿದೆ. ಗ್ರಾಮಸ್ಥರು ದಾಳಿ ಮಾಡಿದ ಬಳಿಕ ಅಕ್ಷರಶಃ ಗ್ರಾಮಸ್ಥರ ವಿರುದ್ಧ ಸಮರಹೂಡಿರುವ ಸಲಗವು ಈಗಾಗಲೇ 11 ಜನರನ್ನು ತನ್ನ ರೋಷಾಗ್ನಿಗೆ ತುತ್ತಾಗಿಸಿದೆ.
ಅಸ್ಸಾಂ ಕಾಡುಗಳಿಂದ ಬರುತ್ತದೆಂದು ಭಾವಿಸಲಾಗಿರುವ ಆನೆ, ಜಾಪಾ ಜಿಲ್ಲೆಯ ಪೂರ್ವ ಚಹಾತೋಟದಿಂದ ನೇಪಾಳ ಪ್ರವೇಶಿಸಿದ ಬಳಿಕ, ಗ್ರಾಮಸ್ಥರ ಚೂಪಾದ ಆಯುಧಗಳ ದಾಳಿಗೆ ಗುರಿಯಾಗಿ ಹುಚ್ಚಾಪಟ್ಟೆಯಾಗಿ ಓಡಿತು. ಇದಾದ ಬಳಿಕ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು, ಸುಮಾರು 11 ಜನರನ್ನು ಹತ್ಯೆಮಾಡಿತು. ಮೊದಲನೇ ಹತ್ಯೆಯು ನ.24ರಂದು ಸಂಭವಿಸಿದ್ದು, ನೇಪಾಳದೊಳಕ್ಕೆ ಆಳಪ್ರದೇಶದವರೆಗೆ ಪ್ರವೇಶಿಸಿ ಉದಯಪುರ್ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಯನ್ನು ಕೊಂದಿತು.
ಬಳಿಕ ಮೂರು ದಿನಗಳಲ್ಲಿ ಇಬ್ಬರು ಮಹಿಳೆಯರು ಮತ್ತು 7 ವರ್ಷದ ಮಗು ಸೇರಿದಂತೆ ಜಿಲ್ಲೆಯ ನಾಲ್ವರನ್ನು ಕೊಂದಿತು. ಕಲ್ಲನ್ನು ತೂರಿ, ಪಟಾಕಿ ಸ್ಫೋಟಿಸುವ ಮೂಲಕ ಗ್ರಾಮಸ್ಥರು ಬೆನ್ನಟ್ಟಿದರೂ ಆಕ್ರೋಶಿತ ಸಲಗವು ಸಿಂಧುಲಿ ಜಿಲ್ಲೆಗೆ ತೆರಳಿ ಅಲ್ಲಿ 18 ವರ್ಷದ ಬಾಲಕ ಸೇರಿದಂತೆ ಮೂವರನ್ನು ಕೊಂದಿತು. ಬಾಲಕ ನುಗ್ಗಿಬರುವ ಆನೆ ದೇವರಿಗೆ ಹೂವುಗಳು ಮತ್ತು ಹಾರಗಳನ್ನು ಅರ್ಪಿಸಿ ಪ್ರಾರ್ಥನೆಗೆ ಪ್ರಯತ್ನಿಸುವಾಗಲೇ ಅದು ಕೊಂದುಹಾಕಿತು.
ಸಿಂಧುಲಿಯಿಂದ ಸಲಗವು ಧನುಶಾಗೆ ತೆರಳಿ, ಅಲ್ಲಿ ಆಶ್ಚರ್ಯಚಕಿತ ಗ್ರಾಮಸ್ಥರು ಆನೆಯ ಹತ್ಯೆಯನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ್ದಾರೆ. 45 ವರ್ಷ ಪ್ರಾಯದ ದಲಿತ ಮಹಿಳೆ ಉರ್ಮಿಳಾ ದೇವಿ ಮಹತೊ ದೋವಾರ್ ಅರಣ್ಯದಲ್ಲಿ ಸೌದೆ ಸಂಗ್ರಹಿಸುತ್ತಿರುವಾಗಲೇ ಆನೆಯ ಕಾಲ್ತುಳಿತಕ್ಕೆ ಬಲಿಯಾದಳು. ಮಹಿಳೆಯ ಇಬ್ಬರು ಮಕ್ಕಳು ಮತ್ತು ಸೋದರಳಿಯ ಸಮೀಪದ ತೊರೆಗೆ ಹಾರಿ ತಪ್ಪಿಸಿಕೊಳ್ಳಲು ಯಶಸ್ವಿಯಾದರು.