ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಜಿರಿಸ್ತಾನದಿಂದ ತಾಲಿಬಾನಿಗಳನ್ನು ಅಟ್ಟಿದ ಪಾಕ್ (Islamabad | Gilani | Taliban | Al-Qaeda)
Bookmark and Share Feedback Print
 
ಇಸ್ಲಾಮಿಕ್ ಬಂಡುಕೋರತ್ವದ ವಿರುದ್ಧ ರಾಷ್ಟ್ರದ ಹೋರಾಟದಲ್ಲಿ ಮುಖ್ಯ ಸಮರಭೂಮಿಯಾದ ದಕ್ಷಿಣ ವಾಜಿರಿಸ್ತಾನದಿಂದ ಸೇನೆ ತಾಲಿಬಾನ್ ಉಗ್ರಗಾಮಿಗಳನ್ನು ಹೊರಗಟ್ಟಿದೆಯೆಂದು ಪಾಕಿಸ್ತಾನದ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಶನಿವಾರ ತಿಳಿಸಿದ್ದಾರೆ.

ಸಶಸ್ತ್ರ ಪಡೆಗಳು ಈ ವರ್ಷ ಪಾಕಿಸ್ತಾನ ತಾಲಿಬಾನ್ ಭದ್ರಕೋಟೆ ಮತ್ತು ಅಲ್ ಖಾಯಿದಾ ಹೋರಾಟಗಾರರು ಮತ್ತಿತರ ಉಗ್ರಗಾಮಿಗಳ ಸ್ವರ್ಗವಾದ ಆಫ್ಘಾನಿಸ್ತಾನ ಗಡಿಯಲ್ಲಿರುವ ಬುಡಕಟ್ಟು ಪ್ರದೇಶದಾದ್ಯಂತ ಬಹುವಿಧದ ಕಾರ್ಯಾಚರಣೆಗಳನ್ನು ಆರಂಭಿಸಿದೆ.ದಕ್ಷಿಣ ವಾಜಿರಿಸ್ತಾನದಲ್ಲಿ ಕಾರ್ಯಾಚರಣೆ ಮುಕ್ತಾಯವಾಗಿದೆ.

ಈಗ ಕಾರ್ಯಾಚರಣೆಯನ್ನು ಆರ್ಕಜಾಯಿ ಏಜನ್ಸಿಗೆ ಒಯ್ಯಲು ಚರ್ಚೆ ನಡೆಯುತ್ತಿದೆಯೆಂದು ಗಿಲಾನಿ ಲಾಹೋರ್ ಪೂರ್ವನಗರದಲ್ಲಿ ವರದಿಗಾರರಿಗೆ ತಿಳಿಸಿದರು. ಗಿಲಾನಿ ಪ್ರತಿಕ್ರಿಯೆಗಳಿಗೆ ಉತ್ತರಿಸಲು ಮಿಲಿಟರಿ ಅಧಿಕಾರಿಗಳು ತಕ್ಷಣವೇ ಲಭ್ಯವಾಗಲಿಲ್ಲ. ತಾಲಿಬಾನ್ ಭದ್ರನೆಲೆಯ ಬುಡಕಟ್ಟು ಜಿಲ್ಲೆಯನ್ನು ಮುಕ್ತಗೊಳಿಸಲು ಅಕ್ಬೋಬರ್‌ನಲ್ಲಿ ಸುಮಾರು 30,000 ಪಡೆಗಳು ದಕ್ಷಿಣ ವಾಜಿರಿಸ್ತಾನಕ್ಕೆ ಹರಿದುಬಂದಿದ್ದರಿಂದ ಬಾಂಬ್ ಸ್ಫೋಟಗಳು ಮತ್ತು ಪ್ರತೀಕಾರದ ದಾಳಿಗಳು ಹೆಚ್ಚಿದವು.

ಸೋಮವಾರದಿಂದ ಸ್ಫೋಟಗಳ ಅಲೆಯಿಂದ ಸುಮಾರು 72 ಜನರು ಮೃತಪಟ್ಟಿದ್ದು, ಪೂರ್ವ ಲಾಹೋರ್‌ನಲ್ಲಿ ಮಾರಕ ದಾಳಿ ನಡೆದಿದೆ. ಪಾಕಿಸ್ತಾನದ ಎರಡನೇ ಜನವಸತಿ ನಗರದ ಮಾರುಕಟ್ಟೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿಯಿಂದ 51 ಜನರು ಹತರಾಗಿದ್ದರು.

ಬುಡಕಟ್ಟು ವಲಯದ ಕೇಂದ್ರವಾದ ಒರ್ಕಜಾಯ್ ಜಿಲ್ಲೆಗೆ ಅನೇಕ ಉಗ್ರಗಾಮಿಗಳು ಪರಾರಿಯಾಗಿದ್ದಾರೆಂದು ನಂಬಲಾಗಿದ್ದು, ಅಲ್ಲಿ ಪಡೆಗಳು 9 ಉಗ್ರಗಾಮಿಗಳನ್ನು ಹತ್ಯೆ ಮಾಡಿದ್ದಾರೆ ಮತ್ತು ವೈಮಾನಿಕ ದಾಳಿಯಿಂದ ಎರಡು ಅಡಗುತಾಣಗಳನ್ನು ನಾಶಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ