ಕೋಪನ್‌ಹೆಗನ್, ಭಾನುವಾರ, 13 ಡಿಸೆಂಬರ್ 2009( 10:08 IST )
ಇಲ್ಲಿ ನಡೆಯುತ್ತಿರುವ ಹವಾಮಾನ ಸಮ್ಮೇಳನದಲ್ಲಿ ಜಾಗತಿಕ ತಾಪಮಾನದ ಬಗ್ಗೆ ವಿಶ್ವಸಂಸ್ಥೆ ಹವಾಮಾನ ಸಮಿತಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಸಾವಿರ ಮಂದಿಯನ್ನು ಭಾನುವಾರ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಕೋಪನ್‌ಹೆಗನ್‌ನಲ್ಲಿ ನಡೆಯುತ್ತಿರುವ ಜಾಗತಿಕ ತಾಪಮಾನ ಕುರಿತ ಸಮ್ಮೇಳನದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರು ರಾಲಿಯಲ್ಲಿ ನಡೆಸಿ ಬಿಗಿ ಭದ್ರತೆ ಹೊಂದಿರುವ ಕಾನ್ಫರೆನ್ಸ್ ಸೆಂಟರ್‌ನೊಳಕ್ಕೆ ನುಗ್ಗಲು ಪ್ರಯತ್ನಿಸಿದಾಗ ಸಾವಿರಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಯಿತು ಎಂದು ತಿಳಿಸಿದ್ದಾರೆ.
ಜಾಗತಿಕ ತಾಪಮಾನಕ್ಕೆ ಸಂಬಂಧಿಸಿದಂತೆ ಕೋಪನ್‌ಹೆಗನ್‌ನಲ್ಲಿ ಬಹುತೇಕ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಯುತ್ತಿತ್ತು, ಆದರೆ ಪ್ರತಿಭಟನೆಯಲ್ಲಿ ಕೆಲವು ಯುವಕರು ಕಲ್ಲುಗಳನ್ನು ತೂರಲು ಆರಂಭಿಸಿದಾಗ ಪೊಲೀಸರು ಲಾಠಿ ಪ್ರಹಾರ ಆರಂಭಿಸಿದ್ದರು. ಪರಿಸ್ಥಿತಿ ಹತೋಟಿಗೆ ಬಾರದಿದ್ದಾಗ ಪೊಲೀಸರು ಪ್ರತಿಭಟನಾಕಾರರ ಸುತ್ತುವರಿದು ಹಿಂಸಾಚರಕ್ಕಿಳಿದ ಯುವಕರನ್ನು ಬಂಧಿಸಿ ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಯುರೋಪ್‌ನ ಬ್ಲ್ಯಾಕ್ ಬ್ಲೋಕ್ಸ್ ಉಗ್ರಗಾಮಿ ಸಂಘಟನೆಯ 400ಮಂದಿ ಸದಸ್ಯರು ಸೇರಿದಂತೆ 968ಮಂದಿಯನ್ನು ಬಂಧಿಸಿದ್ದು, ಇದರಲ್ಲಿ ವಿಚಾರಣೆಯ ಬಳಿಕ 150ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.