ದ.ವಜಿರಿಸ್ತಾನ್ ಉಗ್ರರ ವಿರುದ್ಧದ ಕಾರ್ಯಾಚರಣೆ ಅಂತ್ಯ: ಪಾಕ್
ಇಸ್ಲಾಮಾಬಾದ್, ಭಾನುವಾರ, 13 ಡಿಸೆಂಬರ್ 2009( 10:35 IST )
ದಕ್ಷಿಣ ವಜಿರಿಸ್ತಾನದಲ್ಲಿ ತಾಲಿಬಾನ್ ಉಗ್ರರ ವಿರುದ್ಧ ಪಾಕ್ ಮಿಲಿಟರಿ ನಡೆಸುತ್ತಿದ್ದ ಕಾರ್ಯಾಚರಣೆ ಪೂರ್ಣಗೊಂಡಿರುವುದಾಗಿ ಪಾಕಿಸ್ತಾನ ತಿಳಿಸಿದ್ದು, ಇನ್ನು ಉಳಿದ ಬುಡಕಟ್ಟು ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದೆ.
ಉಗ್ರರ ವಿರುದ್ಧದ ದಾಳಿ ಇನ್ನುಳಿದ ಪ್ರದೇಶಗಳಲ್ಲಿ ಮುಂದುವರಿಯಲಿದೆ ಎಂದು ಹೇಳಿರುವ ಪಾಕ್, ಅಫ್ಘಾನಿಸ್ತಾನ್ ಮತ್ತು ದಕ್ಷಿಣ ವಜಿರಿಸ್ತಾನ ಭಾಗಗಳಲ್ಲಿ ಸುಮಾರು 30ಸಾವಿರ ಭದ್ರತಾ ಸಿಬ್ಬಂದಿಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ್ದು, ಅದೀಗ ಅಂತಿಮಗೊಂಡಿರುವುದಾಗಿ ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ವಿವರಿಸಿದ್ದಾರೆ.
ದಕ್ಷಿಣ ವಜಿರಿಸ್ತಾನದಲ್ಲಿ ತಾಲಿಬಾನ್ ಉಗ್ರರ ವಿರುದ್ಧ ಅಕ್ಟೋಬರ್‌ನಲ್ಲಿ ಆರಂಭಿಸಿದ್ದ ಕಾರ್ಯಾಚರಣೆಯಲ್ಲಿ 589 ಉಗ್ರರು ಹಾಗೂ 79ಸೈನಿಕರು ಸಾವನ್ನಪ್ಪಿದ್ದಾರೆ.
ದಕ್ಷಿಣ ವಜಿರಿಸ್ತಾನ್ ಭಾಗದಲ್ಲಿ ಕಾರ್ಯಾಚರಣೆ ಅಂತಿಮಗೊಂಡಿರುವ ಹಿನ್ನೆಲೆಯಲ್ಲಿ, ಓರ್ಕಾಜೈ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಹೇಳಿದೆ.