ಅಮೆರಿಕ ಮೆಟ್ರೋಪೊಲಿಸ್‌ನ ಜಿದ್ದಾಜಿದ್ದಿನ ಹಣಾಹಣಿಯ ಚುನಾವಣೆಯಲ್ಲಿ ಪ್ರಥಮ ಬಾರಿಗೆ 'ಸಲಿಂಗಿ' ಅನ್ನಿಯೊಸೆ ಪಾರ್ಕರ್ ಹ್ಯೂಸ್ಟನ್ ಮೇಯರ್ ಆಗಿ ಚುನಾಯಿತರಾಗಿದ್ದಾರೆ.
ಮೊದಲ ಬಾರಿಗೆ ಹ್ಯೂಸ್ಟನ್‌ನಲ್ಲಿ ಸಲಿಂಗಿಯೊಬ್ಬರನ್ನು ಮೇಯರ್‌ನನ್ನಾಗಿ ಆಯ್ಕೆ ಮಾಡಿದ್ದಾರೆ. ಹ್ಯೂಸ್ಟನ್ ನಗರದಲ್ಲಿ 2.2ಮಿಲಿಯನ್ ಜನಸಂಖ್ಯೆ ಇದೆ. ಮೇಯರ್ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ 53ರ ಹರೆಯದ ಪಾರ್ಕರ್ ಅನ್ನು ಬಹುಮತ ನೀಡುವುದರೊಂದಿಗೆ ಆಯ್ಕೆ ಮಾಡಿದ್ದಾರೆ.
ಸಲಿಂಗಿ ಪಾರ್ಕರ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಗೇನೆ ಲೋಕೆ ಅವರನ್ನು ಸೋಲಿಸಿದ್ದಾರೆ. ಲೋಕೆ ಅವರು ನಗರದ ಮಾಜಿ ನ್ಯಾಯವಾದಿಯಾಗಿದ್ದಾರೆ. ಆದರೆ ಮೇಯರ್ ಗಿರಿಗಾಗಿ ನಡೆದ ಚುನಾವಣೆಯಲ್ಲಿ ಪಾರ್ಕರ್ ವಿರುದ್ಧ ಸೋಲು ಅನುಭವಿಸಿದ್ದಾರೆ.
ಪ್ರಥಮ ಬಾರಿಗೆ ಹ್ಯೂಸ್ಟನ್ ಜನರು ಸಲಿಂಗಿಯೊಬ್ಬರನ್ನು ಮೇಯರ್ ಆಗಿ ಆಯ್ಕೆ ಮಾಡುವ ಮೂಲಕ ನೂತನ ಇತಿಹಾಸವನ್ನೇ ಸೃಷ್ಟಿಸಿದ್ದಾರೆ ಎಂದು ಪಾರ್ಕರ್ ಗೆಲುವಿನ ನಂತರ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಪ್ರಥಮ ಬಾರಿಗೆ ಸಲಿಂಗಿಯೊಬ್ಬರು ಮೇಯರ್ ಆಗಿ ಆಯ್ಕೆಯಾಗಿದ್ದನ್ನು ಸ್ವಾಗತಿಸಿರುವ ಸಲಿಂಗಿಗಳು ಹ್ಯೂಸ್ಟನ್‌ನಲ್ಲಿ ಸಂಭ್ರಮಿಸಿದರು.