ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಾ-ಅರಬ್ ಸ್ನೇಹಕ್ಕೆ ಆಲ್‌ಖೈದಾ ಮುಖ್ಯಸ್ಥ ಟೀಕೆ (Barrack Obama | Al Qaeda | Ayman Al-Zawahri | Osama Bin Laden)
Bookmark and Share Feedback Print
 
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅರಬ್ ಜಗತ್ತಿನ ಹಾದಿ ತಪ್ಪಿಸುತ್ತಿದ್ದು, ಮಧ್ಯಪ್ರಾಚ್ಯದ ಶಾಂತಿ ಮಾತುಕತೆ ಮುಂದುವರಿಕೆಯು ವಿಫಲವಾಗಿದೆ ಎಂದು ಆರೋಪಿಸಿರುವ ಆಲ್ ಖೈದಾ ಉಪನಾಯಕ, ಅಮೆರಿಕಾ ವಿರುದ್ಧದ ಹೋರಾಟದಲ್ಲಿ ಉಗ್ರರು ಹೆಣಗಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ಅರಬ್-ಅಮೆರಿಕಾ ಸ್ನೇಹವನ್ನು ಮುಸ್ಲಿಮರು ಮತ್ತು ನಾಸ್ತಿಕರ ನಡುವಿನ ಯುದ್ಧ ಎಂದು ಆತ ಬಣ್ಣಿಸಿದ್ದಾನೆ.

ಇಂಟರ್ನೆಟ್‌ಗೆ ಹೊಸದಾಗಿ ರವಾನಿಸಿರುವ ಸಂದೇಶವೊಂದರಲ್ಲಿ ಆಯ್ಮನ್ ಅಲ್-ಜವಾಹರಿ, ಒಬಾಮ ದಿಗ್ಬಂಧನ ಮತ್ತು ಆಕ್ರಮಣಗಳ ಹೊರತಾಗಿ ಈ ಪ್ರಾಂತ್ಯಕ್ಕೆ ಏನೂ ಮಾಡಿಲ್ಲ ಎಂದು ಆರೋಪಿಸಿದ್ದಾನೆ.

ನಗು ಮುಖದೊಂದಿಗೆ ಗೌರವ ಮತ್ತು ಮನದಟ್ಟು ಮಾಡಿಕೊಳ್ಳುವ ಸೋಗು ಹಾಕಿಕೊಂಡಿರುವ ಒಬಾಮ ಗುರಿಯಿರುವುದು ಕೇವಲ ಇಸ್ರೇಲನ್ನು ಬೆಂಬಲಿಸುವುದು ಮಾತ್ರ ಎಂದು ಜವಾಹರಿ ಪೋಸ್ಟ್ ಮಾಡಿರುವ 26 ನಿಮಿಷಗಳ ಆಡಿಯೋ ಧ್ವನಿಮುದ್ರಿಕೆಯಲ್ಲಿ ತಿಳಿಸಲಾಗಿದೆ.

ಚುನಾವಣೆಯಲ್ಲಿ ಆಯ್ಕೆಯಾಗುವ ಸಂದರ್ಭದಲ್ಲೇ ಒಬಾಮ ವಿರುದ್ಧ ಟೀಕೆಗಳನ್ನು ನಡೆಸುತ್ತಾ ಬಂದಿರುವ ಆಲ್ ಖೈದಾ ಉಗ್ರಗಾಮಿ ಸಂಘಟನೆಯಲ್ಲಿ ಒಸಾಮ ಬಿನ್ ಲಾಡೆನ್ ನಂತರದ ಸ್ಥಾನದಲ್ಲಿರುವ ಜವಾಹರಿ, ಬಿಳಿಯರಿಗೆ ತಲೆ ಬಾಗುವ ಕರಿಯ ಅಮೆರಿಕಾ ಅಧ್ಯಕ್ಷರನ್ನು 'ನೀಗ್ರೋ ನೆಲೆ' ಎಂದಿದ್ದ.

ಇಸ್ರೇಲ್‌ ಜತೆಗಿನ ಶಾಂತಿ ಒಪ್ಪಂದವನ್ನು ಅಮೆರಿಕಾದೊಂದಿಗೆ ಬೆಂಬಲಿಸುತ್ತಿರುವ ಈಜಿಪ್ಟ್ ಅಧ್ಯಕ್ಷ, ಜೋರ್ಡಾನಿಯನ್ ಮತ್ತು ಸೌದಿ ದೊರೆಗಳನ್ನು ಕೂಡ ಜವಾಹರಿ ತನ್ನ ಹೇಳಿಕೆಯಲ್ಲಿ ಜರೆದಿದ್ದಾನೆ.

ಮುಸ್ಲಿಮರು ಮತ್ತು ಪಾಲಿಸ್ತೇನೀಯರು ಧರ್ಮಯುದ್ಧ ಅಥವಾ ಜಿಹಾದಿನಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿರುವ ಆತ, ಇಸ್ರೇಲ್ ಮಾತ್ರವಲ್ಲದೆ ಪಾಲಿಸ್ತೇನ್ ಪ್ರಾಂತ್ಯದಲ್ಲೂ ಕುಕೃತ್ಯಗಳನ್ನು ನಡೆಸಬೇಕೆಂದು ಒತ್ತಾಯಿಸಿದ್ದಾನೆ.

ಅದೇ ಹೊತ್ತಿಗೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಕರ್ಮಕಾಂಡಗಳಿಗೆ ಆತ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಲ್ಲಿ ಧರ್ಮಯುದ್ಧ ನಡೆಯುತ್ತಿದೆ ಎಂದು ಸಂತೋಷದಿಂದ ಹೇಳಿಕೊಂಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ