ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹವಾಮಾನ: ಮುರಿದು ಬಿದ್ದ 'ಕೋಪನ್‌ಹೇಗನ್' ಮಾತುಕತೆ (Africa | Copenhagen | Kyoto | Australia | Climate Change)
Bookmark and Share Feedback Print
 
ಶ್ರೀಮಂತ ದೇಶಗಳು ಬಲವಂತವಾಗಿ ವಿಶ್ವಸಂಸ್ಥೆಯ ಕ್ವೆಟೋ ನಿಯಮಾವಳಿಗಳನ್ನು ಅಭಿವೃದ್ಧಿಶೀಲ ದೇಶಗಳ ಮೇಲೆ ಹೇರಲು ಯತ್ನಿಸುತ್ತಿದೆ ಎಂದು ಆರೋಪಿಸಿ ಸೋಮವಾರ ಇಲ್ಲಿ ನಡೆಯುತ್ತಿದ್ದ ಹವಾಮಾನ ವೈಪರೀತ್ಯ ಕುರಿತ ಶೃಂಗಸಭೆಯಿಂದ ಆಫ್ರಿಕಾ ಹೊರನಡೆದ ಘಟನೆ ನಡೆದಿದೆ.

ಜಾಗತಿಕ ತಾಪಮಾನ ತಡೆ ಕುರಿತು ಇಲ್ಲಿ ನಡೆಯುತ್ತಿರುವ ಗಂಭೀರ ಚರ್ಚೆಯ ಸಮಾವೇಶದಲ್ಲಿ ಆಫ್ರಿಕಾ ವಿರೋಧ ವ್ಯಕ್ತಪಡಿಸಿ ದಿಢೀರನೆ ಹೊರನಡೆದ ಘಟನೆ ತುಂಬಾ ವಿಷಾದಕರವಾದದ್ದು ಎಂದು ಆಸ್ಟ್ರೇಲಿಯಾದ ಹವಾಮಾನ ಬದಲಾವಣೆ ಖಾತೆ ಸಚಿವ ಪೆನ್ನಿ ವಾಂಗ್ ತಿಳಿಸಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಶ್ರೀಮಂತ ದೇಶಗಳು ಬಲವಂತವಾಗಿ ಅಭಿವೃದ್ಧಿಶೀಲ ದೇಶಗಳ ಮೇಲೆ ವಿಶ್ವಸಂಸ್ಥೆಯ ಕ್ವೆಟೋ ನಿಯಮಾವಳಿಯನ್ನು ಹೇರಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಈಗಾಗಲೇ ಭಾರತ ಸೇರಿದಂತೆ ಹಲವಾರು ದೇಶಗಳು ವಿರೋಧ ವ್ಯಕ್ತಪಡಿಸಿದ್ದವು. ಆ ನಿಟ್ಟಿನಲ್ಲಿ ಸೋಮವಾರವೂ ಕೂಡ ನಡೆದ ಸಭೆಯಲ್ಲಿ ಕ್ವೆಟೋ ನಿಯಮಾವಳಿ ಪ್ರಸ್ತಾಪವಾಗುತ್ತಿದ್ದಂತೆಯೇ ತೀವ್ರ ವಿರೋಧ ವ್ಯಕ್ತಪಡಿಸಿದ ಆಫ್ರಿಕಾ ಸಭೆಯಿಂದ ಹೊರನಡೆದ ಪರಿಣಾಮ ಮಾತುಕತೆ ರದ್ದಾಗಿದೆ.

ನಿಜಕ್ಕೂ ಕ್ವೆಟೋ ಪ್ರೋಟೋಕಾಲ್ ಅನ್ವಯವಾಗಬೇಕಾಗಿದ್ದು ಶ್ರೀಮಂತ ದೇಶಗಳಿಗೆ ವಿನಃ, ಅಭಿವೃದ್ಧಿಶೀಲ ದೇಶಗಳಿಗಲ್ಲ, ಆದರೆ ಶ್ರೀಮಂತ ದೇಶಗಳು ಹವಾಮಾನ ವೈಪರೀತ್ಯ ತಡೆ ಹೆಸರಿನಲ್ಲಿ ಅಭಿವೃದ್ಧಿಶೀಲ ದೇಶಗಳನ್ನು ಮಣಿಸಲು ಯತ್ನಿಸುತ್ತಿರುವುದಾಗಿ ಆಫ್ರಿಕಾ ಅಸಮಾಧಾನ ವ್ಯಕ್ತಪಡಿಸಿದೆ. ಕ್ವೆಟೋ ನಿಯಮಾವಳಿಯಲ್ಲಿ ಅಮೆರಿಕ ಸೇರಿಲ್ಲ, ಹಾಗಾಗಿ ಕ್ವೆಟೋ ನಿಯಮಾವಳಿಯೇ ನ್ಯಾಯಯುತವಾದದ್ದಲ್ಲ ಎಂದು ಕಿಡಿಕಾರಿದೆ.
ಸಂಬಂಧಿತ ಮಾಹಿತಿ ಹುಡುಕಿ