ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ಹಡಗು ಸೋಮಾಲಿ ಕಡಲ್ಗಳ್ಳರ ವಶಕ್ಕೆ (Somalian pirates | India | Nairobi | Kenyan court)
Bookmark and Share Feedback Print
 
ಸೋಮಾಲಿಯ ಕಡಲ ಪ್ರದೇಶದಲ್ಲಿ ಭಾರತೀಯ ಹಡಗೊಂದನ್ನು ಕಡಲ್ಗಳ್ಳರು ತಮ್ಮ ವಶಪಡಿಸಿಕೊಂಡಿದ್ದು, ವಾರದಲ್ಲಿ ಕಡಲ್ಗಳ್ಳರು ನಡೆಸಿರುವ ಮೂರನೇ ಘಟನೆ ಇದಾಗಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಮೂಲದ ಲಕ್ಷ್ಮಿ ಸಾಗರ್ ಎಂಬ ಹೆಸರಿನ ಹಡಗನ್ನು ಸೋಮಾಲಿ ಕಡಲ್ಗಳ್ಳರು ವಶಪಡಿಸಿಕೊಂಡಿದ್ದು, ಘಟನೆ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ ಎಂದು ಪೂರ್ವ ಆಫ್ರಿಕಾದ ಆಂಡ್ರ್ಯೂ ಮೌವಾಂಗುರಾ ವಿವರಣೆ ನೀಡಿದ್ದಾರೆ.

ಭಾನುವಾರದಂದು ಹಡಗನ್ನು ಕಡಲ್ಗಳ್ಳರು ವಶಕ್ಕೆ ತೆಗೆದುಕೊಂಡಿರಬೇಕು.ಹಡಗಿನಲ್ಲಿದ್ದ ಸಿಬ್ಬಂದಿಗಳು ಭಾರತೀಯರಾಗಿದ್ದಾರೆ. ಆದರೆ ಎಷ್ಟು ಮಂದಿ ಸಿಬ್ಬಂದಿಗಳಿದ್ದಾರೆ ಎಂಬುದು ಖಚಿತವಾಗಿ ತಿಳಿದಿಲ್ಲ ಎಂದು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಆ ನಿಟ್ಟಿನಲ್ಲಿ ಭಾರತೀಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದಿರುವುದಾಗಿ ತಿಳಿಸಿರುವ ಅವರು, ಆದರೆ ಹಡಗನ್ನು ಯಾವಾಗ ಕಡಲ್ಗಳ್ಳರು ವಶಕ್ಕೆ ತೆಗೆದುಕೊಂಡರು,ಎಷ್ಟು ಮಂದಿ ಇದ್ದಾರೆಂಬುದು ತಿಳಿದಿಲ್ಲ ಎಂದು ಆಂಡ್ರ್ಯೂ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ