ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಬೂಲ್: ಆತ್ಮಹತ್ಯಾ ಬಾಂಬ್ ದಾಳಿಗೆ 8 ಬಲಿ (Suicide attack | Kabul | Afghan | Hamid Karzai)
Bookmark and Share Feedback Print
 
ಅಫ್ಘಾನಿಸ್ತಾನದ ರಾಜಧಾನಿಯಾದ ಕಾಬೂಲ್‌ನ ವಿದೇಶಿ ಅತಿಥಿ ಗೃಹದ ಸಮೀಪ ಮಂಗಳವಾರ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ನಾಲ್ಕು ಮಹಿಳೆಯರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದು, 40ಮಂದಿ ಗಾಯಗೊಂಡಿರುವುದಾಗಿ ಆಂತರಿಕ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಆತ್ಮಹತ್ಯಾ ದಾಳಿಯಲ್ಲಿ ಎಂಟು ಮಂದಿ ಬಲಿಯಾಗಿದ್ದಾರೆ. ಇದರಲ್ಲಿ ನಾಲ್ಕು ಮಹಿಳೆಯರು ಹಾಗೂ ನಾಲ್ಕು ಪುರುಷರು ಸೇರಿದ್ದಾರೆ. ಇದು ಆತ್ಮಹತ್ಯಾ ಬಾಂಬ್ ದಾಳಿ ಎಂದು ಆಂತರಿಕ ಸಚಿವಾಲಯದ ವಕ್ತಾರ ಜಾಮರೈ ಬಾಶಾರಿ ಹೇಳಿದ್ದಾರೆ.

ವಿದೇಶಿ ಅತಿಥಿಗೃಹದ ವಾಜೀರ್ ಅಕ್ಬರ್ ಖಾನ್ ಮನೆ ಸಮೀಪ ಈ ಸ್ಫೋಟ ಸಂಭವಿಸಿದೆ. ಖಾನ್ ಅವರು ದೇಶದ ಮೊದಲ ಉಪರಾಷ್ಟ್ರಪತಿಯಾಗಿದ್ದರು. ಇದರಲ್ಲಿ ಇಬ್ಬರು ಅಂಗರಕ್ಷಕರು ಕೂಡ ಸಾವನ್ನಪ್ಪಿರುವುದಾಗಿ ಅಧ್ಯಕ್ಷ ಹಮೀದ್ ಕರ್ಜಾಯೈ ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ