ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಯಲಾದ ತೈವಾನ್ ಮಹಿಳಾ ಯೋಧರ ಕಾಮಚೇಷ್ಟೆ! (Female soldier | Taiwan soldier | chen | Liu Chih-chian)
Bookmark and Share Feedback Print
 
ತೈವಾನ್ ಮಿಲಿಟರಿಯ ಮಹಿಳಾ ಸೈನಿಕರ ಅಸಭ್ಯ ಕಾಮಚೇಷ್ಟೆಯ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಭಾರೀ ವಿವಾದಗಳು ಸೃಷ್ಟಿಯಾಗುವ ಮುನ್ಸೂಚನೆಗಳು ದೊರೆತಿರುವ ಬೆನ್ನಿಗೆ ಸೇನೆ ಸಾರ್ವಜನಿಕರ ಕ್ಷಮೆ ಯಾಚಿಸಿದೆ.

ಮಹಿಳಾ ಯೋಧರು ಕಾಮಚೇಷ್ಟೆಯನ್ನು ಬಿಂಬಿಸುವ ತಮ್ಮದೇ ಚಿತ್ರಗಳನ್ನು ತೆಗೆದು ಬ್ಲಾಗಿನಲ್ಲಿ ಹಾಕಿದ ನಂತರ ಈ ವಿವಾದ ಸೃಷ್ಟಿಯಾಗಿದೆ. ಅದನ್ನು ಇಲ್ಲಿನ ಪತ್ರಿಕೆಗಳು, ಇಂಟರ್ನೆಟ್‌ ಸೈಟುಗಳು ಭಾರೀ ವಿವಾದಕ್ಕೆ ಗುರಿ ಮಾಡಿದ್ದವು.

ಕಳೆದೈದು ತಿಂಗಳುಗಳ ಹಿಂದಷ್ಟೇ ಪುರುಷ ಯೋಧರ ಸೆಕ್ಸ್ ವಿಡಿಯೋ ಪ್ರಕರಣವೊಂದು ಬಯಲಾಗಿ ಶಿಕ್ಷಿಸಿದ ನಂತರ ಮಹಿಳೆಯರ ಪ್ರಕರಣ ಬಹಿರಂಗವಾಗಿದೆ.

ತೈವಾನ್ ಟೀವಿ, ಪತ್ರಿಕೆಗಳು ಪ್ರಕಟಿಸಿರುವ ಚಿತ್ರಗಳಲ್ಲಿ ಸೈನ್ಯಾಧಿಕಾರಿಯೊಬ್ಬಳನ್ನು ಮಾತ್ರ ಗುರುತಿಸಲಾಗಿದೆ. ಅವಳ ಅಡ್ಡ ಹೆಸರು ಚೆನ್ ಎಂದು ಹೇಳಲಾಗಿದ್ದು, ಆಕೆ ತನ್ನ ಬ್ಯಾರಕ್ ಮುಂದುಗಡೆ ನಿಂತುಕೊಂಡು ಸಮವಸ್ತ್ರವನ್ನು ಎತ್ತಿ ಬ್ರಾ ತೋರಿಸುವ ಚಿತ್ರವನ್ನು ಬ್ಲಾಗ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು.

ಇಂತಹ ಹಲವು ಫೋಟೋಗಳನ್ನು ಚೆನ್ ಬ್ಲಾಗ್‌ನಲ್ಲಿ ಆರಂಭದಲ್ಲಿ ಪೋಸ್ಟ್ ಮಾಡಲಾಗಿತ್ತು. ಒಂದು ಚಿತ್ರದಲ್ಲಿ ಚೆನ್ ಮತ್ತು ಆಕೆಯ ಇಬ್ಬರು ಸಹಸೈನಿಕರು ತಮ್ಮ ನಡುಬೆರಳನ್ನು ತೋರಿಸಿ ಅಶ್ಲೀಲ ಸಂಕೇತವನ್ನು ನೀಡುತ್ತಿರುವುದು ಮತ್ತು ಯುವತಿಯರಿಬ್ಬರು ಫ್ರೆಂಚ್ ಕಿಸ್ ನೀಡಲು ಸಿದ್ಧರಾಗುತ್ತಿರುವ ಫೋಟೋಗಳು ಬ್ಲಾಗ್‌ನಲ್ಲಿ ಕಾಣಿಸಿಕೊಂಡಿದ್ದವು.

ಪ್ರಕರಣದ ಹಿನ್ನಲೆಯಲ್ಲಿ ಚೆನ್‌ಳನ್ನು ಮಿಲಿಟರಿ ನೀತಿಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಿ ವಜಾ ಮಾಡಲಾಗಿದೆ ಎಂದು ಕಮಾಂಡರ್ ತಿಳಿಸಿದ್ದಾರ.
ಸಂಬಂಧಿತ ಮಾಹಿತಿ ಹುಡುಕಿ