ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಡ್ರಗ್ಸ್ ಮೋಸ; ಭಾರತ ಮೂಲದವನಿಗೆ 12 ವರ್ಷ ಜೈಲು (India | America | Medicine | Rakesh Jyoti Saran)
Bookmark and Share Feedback Print
 
ಇಂಟರ್ನೆಟ್ ಅಕ್ರಮದಲ್ಲಿ ತೊಡಗಿಸಿಕೊಂಡ ಭಾರತ ಮೂಲದ ಅಮೆರಿಕನ್ ಪ್ರಜೆಯೊಬ್ಬನಿಗೆ ಅಮೆರಿಕಾ ನ್ಯಾಯಾಲಯ 12 ವರ್ಷಗಳ ಜೈಲು ಶಿಕ್ಷೆ ಹಾಗೂ 68 ಮಿಲಿಯನ್ ಡಾಲರ್ ದಂಡ ಹೇರಿದೆ.

ಟೆಕ್ಸಾಸ್‌ನ ಅರ್ಲಿಂಗ್ಟನ್‌ನಲ್ಲಿನ ರಾಕೇಶ್ ಜ್ಯೋತಿ ಶರಣ್ (47) ಎಂಬ ವ್ಯಕ್ತಿ 200 ಮಿಲಿಯನ್ ಡಾಲರ್ ಮೌಲ್ಯದ ಉದ್ದೀಪನಾ ದ್ರವ್ಯಗಳನ್ನು ಸೈಬರ್ ಗ್ರಾಹಕರು ಮತ್ತು ಡ್ರಗ್ ಬಳಕೆದಾರರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದ.

ಈತನನ್ನು ಬಂಧಿಸಿ ವಿಚಾರಣೆ ನಡೆಸಿದ ಟೆಕ್ಸಾಸ್‌ನ ಉತ್ತರ ಜಿಲ್ಲೆಯ ನ್ಯಾಯಾಲಯವೊಂದು ಡಿಸೆಂಬರ್ 11ರಿಂದ 144 ತಿಂಗಳುಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಅಲ್ಲದೆ 68 ಮಿಲಿಯನ್ ಡಾಲರ್ ದಂಡವನ್ನೂ ಪಾವತಿಸುವಂತೆ ಆದೇಶಿಸಿದೆ.

ಈ ಪ್ರಕರಣದಲ್ಲಿ ಉಳಿದುಕೊಂಡಿದ್ದ ಕೊನೆಯ ಆರೋಪಿ ಶರಣ್. ಉಳಿದವರ ಅಪರಾಧಗಳು ಈಗಾಗಲೇ ಸಾಬೀತಾಗಿರುವ ಹಿನ್ನಲೆಯಲ್ಲಿ ಅವರು ಶಿಕ್ಷೆ ಅನುಭವಿಸುತ್ತಿದ್ದಾರೆ. ಶರಣ್ ಕೂಡ ಅಪರಾಧಿ ಎಂಬುದು ಸಾಬೀತಾಗುವುದರೊಂದಿಗೆ ಪ್ರಕರಣ ಅಂತ್ಯ ಕಂಡಿದೆ.

2005ರಲ್ಲಿ ಶರಣ್‌ನನ್ನು ಬಂಧಿಸಿ ಆತ ಮತ್ತು ಆತನ ಐವರು ಸಹಚರರ ಮೇಲೆ 201 ದೋಷಾರೋಪಣೆಗಳನ್ನು ಮಾಡಲಾಗಿತ್ತು. 1995ರಿಂದ 2005ರವರೆಗೆ ಇವರು ಆರೋಗ್ಯ ಸಂಬಂಧಿ ಔಷಧಿಗಳಲ್ಲಿ ಮೋಸದ ವ್ಯವಹಾರ, ಹವಾಲಾ ಹಣ ಬಳಕೆ ಮತ್ತು ನಿಯಂತ್ರಿತ ದ್ರವ್ಯಗಳನ್ನು ಅಕ್ರಮವಾಗಿ ವಿತರಿಸಿದ ಆರೋಪ ಸೇರಿದಂತೆ ಹಲವು ಆಪಾದನೆಗಳಿಗೆ ಗುರಿಪಡಿಸಲಾಗಿತ್ತು.

ಅಪರಾಧ ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿರುವ ಶರಣ್ ಸಹಚರರು 33 ತಿಂಗಳುಗಳಿಂದ ಎಂಟು ವರ್ಷಗಳವರೆಗೆ ಜೈಲಿನಲ್ಲಿ ಕಳೆಯಬೇಕಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ