ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶಂಕಿತ ಉಗ್ರ ಡೇವಿಡ್ ಹ್ಯಾಡ್ಲಿ ಎಫ್‌ಬಿಐ ಮಾಹಿತಿದಾರ? (Mumbai attacks | Headley | FBI | Pakistan | America)
Bookmark and Share Feedback Print
 
ಮುಂಬೈ ಭಯೋತ್ಪಾದನೆ ದಾಳಿಯಲ್ಲಿ ಕೈವಾಡ ಇದೆ ಎಂಬ ಶಂಕೆ ಮೇಲೆ ಬಂಧಿತನಾಗಿರುವ ಪಾಕಿಸ್ತಾನಿ ಮೂಲದ ಅಮೆರಿಕದ ಡೇವಿಡ್ ಕೊಲೆಮನ್ ಹ್ಯಾಡ್ಲಿಯನ್ನು ಮಾದಕ ದ್ರವ್ಯ ಸಾಗಾಟ ಆರೋಪದಲ್ಲಿ ಅಮೆರಿಕ ಎರಡು ಬಾರಿ ಬಂಧಿಸಿತ್ತಾದರೂ ಕೂಡ, ಆತ ಎಫ್‌ಬಿಐನ 'ನಂಬಿಕಾರ್ಹ ಮಾಹಿತಿದಾರ' ಎಂಬ ನೆಲೆಯಲ್ಲಿ ಬಿಡುಗಡೆಗೊಳಿಸಿರುವುದಾಗಿ ವರದಿಯೊಂದು ಬಹಿರಂಗಪಡಿಸಿದೆ.

ಮುಂಬೈ ದಾಳಿಯಲ್ಲಿ ಕೈವಾಡವಿದೆ ಎಂದು ಶಂಕಿಸಲಾಗುತ್ತಿರುವ ಡೇವಿಡ್ ಕೊಲೆಮನ್ ಹ್ಯಾಡ್ಲಿ(49)ಯನ್ನು ಕಳೆದ ತಿಂಗಳು ಅಮೆರಿಕದಲ್ಲಿ ಎಫ್‌ಬಿಐ ಅಧಿಕಾರಿಗಳು ಬಂಧಿಸಿದ್ದರು. ಈತನಿಗೆ ಲಷ್ಕರ್ ಇ ತೊಯ್ಬಾ ಜೊತೆ ನಂಟು ಇದೆ ಎಂದು ಹೇಳಲಾಗಿತ್ತು.

ಇದೀಗ ಉಗ್ರಗಾಮಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಬಂಧಿತನಾಗಿರುವ ಹ್ಯಾಡ್ಲಿ ಡ್ರಗ್ ಎನ್‌ಫೋರ್ಸ್‌ಮೆಂಟ್ ಆಡ್ಮಿನಿಸ್ಟ್ರೇಶನ್‌ ಜೊತೆ ಕಳೆದ ಹತ್ತು ವರ್ಷಗಳಿಂದ ಮಾಹಿತಿದಾರನಾಗಿ ಕಾರ್ಯನಿರ್ವಹಿಸಿರುವುದಾಗಿ ವರದಿ ವಿವರಿಸಿದೆ.

ನ್ಯಾಯಾಲಯದ ದಾಖಲೆ ಪ್ರಕಾರ ಹ್ಯಾಡ್ಲಿ ಈ ಮೊದಲು ದಾವೂದ್ ಗಿಲಾನಿ ಎಂಬ ಹೆಸರನ್ನು ಹೊಂದಿದ್ದ. ಈತನನ್ನು ಮಾದಕ ವಸ್ತು ಸಾಗಾಟದ ಸಂದರ್ಭದಲ್ಲಿ ಎರಡು ಬಾರಿ ಬಂಧಿಸಲಾಗಿತ್ತು. ಆತನ ಉತ್ತಮ ನಡುವಳಿಕೆಯಿಂದ ಜೈಲು ಶಿಕ್ಷೆಯನ್ನು ಕಡಿತಗೊಳಿಸಿ ಶೀಘ್ರ ಬಿಡುಗಡೆ ಕಂಡಿದ್ದ. ತದನಂತರ ಆತ ಡ್ರಗ್ ಮಾಫಿಯಾದ ಬಗ್ಗೆ ಉತ್ತಮ ಮಾಹಿತಿದಾರರನಾಗಿ ಕಾರ್ಯನಿರ್ವಹಿಸಿದ್ದ ಎಂದು ವರದಿ ಹೇಳಿದೆ.

ಮುಂಬೈ ದಾಳಿ ಸಂಬಂಧ ಬಂಧಿತನಾಗಿರುವ ಹ್ಯಾಡ್ಲಿ ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸುತ್ತಿರುವುದಾಗಿ ಹೇಳಿರುವ ಎಫ್‌ಬಿಐ ಅಧಿಕಾರಿಗಳು ಆತನ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದು, ಆತನನ್ನು ಮಾಹಿತಿದಾರರನ್ನಾಗಿ ಮಾಡುವ ಕುರಿತು ಪರೋಕ್ಷವಾಗಿ ಮುನ್ಸೂಚನೆಯನ್ನೂ ಕೊಟ್ಟಿದೆ.

ಭಾರತದಲ್ಲಿ ದಾಳಿ ನಡೆಸುವ ಸಲುವಾಗಿ ಈತ 2006 ಮತ್ತು 2009ರಲ್ಲಿ ಭಾರತದ ಪ್ರಮುಖ ನಗರಗಳಾದ ಮುಂಬೈ, ಅಹಮದಾಬಾದ್,ಲಕ್ನೋ, ಆಗ್ರಾ ಮತ್ತು ದೆಹಲಿಗೆ ಭೇಟಿ ನೀಡಿದ್ದ ಎಂಬುದಾಗಿ ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ತಿಳಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ