ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪರಾರಿ ಭೀತಿ; ರಾಣಾನಿಗೆ ಜಾಮೀನು ನಿರಾಕರಿಸಿದ ಅಮೆರಿಕಾ (LeT | Mumbai attack | Tahawwur Hussain Rana | David Coleman Headley)
Bookmark and Share Feedback Print
 
ಅಮೆರಿಕಾದ ಹೊರಗೆ ಭಯೋತ್ಪಾದನಾ ದಾಳಿ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿತನಾಗಿರುವ ಪಾಕಿಸ್ತಾನ ಸಂಜಾತ ಕೆನಡಾ ಪ್ರಜೆ ತಹಾವುರ್ ಹುಸೈನ್ ರಾಣಾನಿಗೆ ಅಮೆರಿಕಾದ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಜಾಮೀನು ನೀಡಿದಲ್ಲಿ ರಾಣಾ ದೇಶ ಬಿಟ್ಟು ಪರಾರಿಯಾಗುವ ಅಪಾಯಗಳಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ನಿರ್ಧಾರದಿಂದ ನಿನಗೆ ತೀವ್ರ ನಿರಾಸೆಯಾಗುತ್ತದೆ ಎಂಬುದು ನನಗೆ ಗೊತ್ತು. ಆದರೆ ಈಗ ನೀನು ತೋರಿಸುತ್ತಿರುವ ನಿನ್ನ ಉತ್ತಮ ನಡತೆಯನ್ನು ಮುಂದುವರಿಸು ಎಂದು ಅಮೆರಿಕಾದ ನ್ಯಾಯಾಧೀಶೆ ನ್ಯಾನ್ ನಾಲೋನ್ ರಾಣಾನಿಗೆ ತಿಳಿಸಿದರು.

ವಿಚಾರಣೆ ಮುಗಿದ ಬಳಿಕ ತನ್ನ ವಕೀಲರಿಗೆ ಹಸ್ತಾಲಾಘವ ಮಾಡಿದ ರಾಣಾನನ್ನು ನ್ಯಾಯಾಲಯದಿಂದ ಹೊರಗೆ ಕರೆದೊಯ್ಯುವ ಮೊದಲು ಕೈಗಳಿಗೆ ಕೋಳಗಳನ್ನು ಹಾಕಲಾಯಿತು.

ರಾಣಾ ಕೆನಡಾದ ಕುಟುಂಬದೊಂದಿದೆ ಗಾಢವಾದ ಸಂಬಂಧ ಹೊಂದಿರುವ ಕಾರಣ ಆತ ಪರಾರಿಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ನ್ಯಾಯಾಧೀಶರು ಭೀತಿ ವ್ಯಕ್ತಪಡಿಸಿದರು. ಆತನ ಸೋದರ ಸಂಬಂಧಿಕರು ಮತ್ತು ತಂದೆ ಕೆನಡಾದಲ್ಲಿದ್ದಾರೆ.

ಡೇವಿಡ್ ಕೋಲ್ಮನ್ ಹೆಡ್ಲಿ ಜತೆ ಸೇರಿಕೊಂಡು ಡ್ಯಾನಿಷ್ ಪತ್ರಿಕೆಯೊಂದರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ರಾಣಾನನ್ನು ಎಫ್‌ಬಿಐ ಬಂಧಿಸಿತ್ತು.

ನಿನ್ನೆಯಷ್ಟೇ ತಾಜಾ ಅಫಿದಾವತ್ ಸಲ್ಲಿಸಿದ್ದ ಅಮೆರಿಕಾ ಸರಕಾರಿ ವಕೀಲರು, 48ರ ಹರೆಯ ರಾಣಾ ಮುಂಬೈ ಉಗ್ರರ ದಾಳಿಯ ಕುರಿತು ಮುಂಚಿತವಾಗಿ ಮಾಹಿತಿ ಹೊಂದಿದ್ದ ಮತ್ತು ದಾಳಿ ನಡೆಸಿದ ಲಷ್ಕರ್ ಇ ತೋಯ್ಬಾ ಸಂಘಟನೆಯ ಸದಸ್ಯರಿಗೆ ಶಹಬ್ಬಾಸ್ ಗಿರಿಯನ್ನೂ ಕೊಟ್ಟಿದ್ದ ಎಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ