ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಮ್ಮದೇ ಗಡುವಿನಂತೆ ಉಗ್ರರ ವಿರುದ್ಧ ಕ್ರಮ: ಜರ್ದಾರಿ ತಿರುಗೇಟು (Zardari | Barack Obama | Pakistan | Washington | White House)
Bookmark and Share Feedback Print
 
ಕಾನೂನಿನ ಭಯವಿಲ್ಲದೆ ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಅಟ್ಟಹಾಸಗೈಯುತ್ತಿರುವ ಉಗ್ರರ ವಿರುದ್ಧ ಪಾಕ್ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ನೀಡಿರುವ ಕೆರೆಗೆ ತಿರುಗೇಟು ನೀಡಿರುವ ಜರ್ದಾರಿ, ನಾವು ನಮ್ಮದೇ ಗುಡುವಿನೊಳಗೆ ಉಗ್ರರನ್ನು ಮಟ್ಟ ಹಾಕುವುದಾಗಿ ಹೇಳಿದ್ದಾರೆ.

ಪಾಕ್ ನೆಲದಲ್ಲಿ ಆಡಗಿ ಕುಳಿತು ಕಾರ್ಯಾಚರಿಸುತ್ತಿರುವ ಉಗ್ರರನ್ನು ಸದೆಬಡಿಯುವ ನಿಟ್ಟಿನಲ್ಲಿ ಅಮೆರಿಕ ಪಾಕಿಸ್ತಾನದ ಮಿಲಿಟರಿ ಪಡೆಯೊಂದಿಗೆ ವೇಗವಾಗಿ ಕಾರ್ಯಾಚರಿಸಲಾಗುವುದು ಎಂದು ಒಬಾಮಾ ಹೇಳಿಕೆ ನೀಡಿದ್ದರು.

ಈ ಬಗ್ಗೆ ಒಬಾಮಾ ಅವರಿಗೆ ಬರೆದಿರುವ ಪತ್ರದಲ್ಲಿ, ಪಾಕ್ ಹಾಗೂ ಬುಡಕಟ್ಟು ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಖಾಯಿದಾ, ತಾಲಿಬಾನ್ ಸೇರಿದಂತೆ ಇನ್ನಿತರ ಉಗ್ರಗಾಮಿ ಸಂಘಟನೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದು ವಿವರಿಸಿದ್ದಾರೆ.

ಅಲ್ಲದೇ, ತಮ್ಮದೇ ನೆಲದಲ್ಲಿ ಠಿಕಾಣಿ ಹೂಡಿ ಅಟ್ಟಹಾಸಗೈಯುತ್ತಿರುವ ಉಗ್ರಗಾಮಿಗಳನ್ನು ಮಟ್ಟ ಹಾಕುವಲ್ಲಿ ಪಾಕ್ ತನ್ನದೇ ಗಡುವಿನೊಳಗೆ ಕ್ರಮ ಕೈಗೊಳ್ಳಿದೆ ಎಂದು ಜರ್ದಾರಿ ಸ್ಪಷ್ಟಪಡಿಸಿರುವುದಾಗಿ ದಿ ವಾಶಿಂಗ್ಟನ್ ಪೋಸ್ಟ್ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ