ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೌಂದರ್ಯ ಸ್ಪರ್ಧೆಯನ್ನು ಸ್ತ್ರೀಯರಿಗೆ ಗುತ್ತಿಗೆ ಕೊಟ್ಟಿಲ್ಲ..! (Beauty contest | Taiwan | swimwear | men)
Bookmark and Share Feedback Print
 
ಸೌಂದರ್ಯ ಸ್ಪರ್ಧೆಯೆಂದರೆ ಈಜುಡುಗೆ, ರಾತ್ರಿಯುಡುಗೆ ಮತ್ತು ಟಿಪ್-ಟಾಪ್ ಬಟ್ಟೆಗಳು ಸಾಮಾನ್ಯ ತಾನೆ. ಅದೇ ರೀತಿ ಈ ವಾರಾಂತ್ಯದಲ್ಲಿ ತೈವಾನ್‌ ರಾಜಧಾನಿ ತೈಪೈಯಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆಯಲ್ಲೂ ಇರಲಿದೆ. ಆದರೆ ಇಲ್ಲಿ ಉದ್ದುದ್ದ ಕೂದಲು, ಬಣ್ಣ ಬಣ್ಣದ ಕಣ್ರೆಪ್ಪೆಗಳು, ಬಳುಕುವ ಶಿಲ್ಪಗಳನ್ನು ಕಾಣುವುದು ಅಸಾಧ್ಯ-- ಯಾಕೆಂದರೆ ಇದು ಪುರುಷರ ಮತ್ತು ಕೇವಲ ಪುರುಷರ ನಡುವಿನ ಸ್ಪರ್ಧೆ.

ಕಳೆದೆರಡು ವಾರಗಳಿಂದ ನೃತ್ಯಾಭ್ಯಾಸ ನಡೆಸುತ್ತಿರುವ 28 ರಾಷ್ಟ್ರಗಳ ವಿಪುಲ ಮಾಂಸಖಂಡಗಳ ಸುಂದರ ಯುವಕರು ಶನಿವಾರ ತೈವಾನ್‌ನಲ್ಲಿ ನಡೆಯಲಿರುವ ಸೌಂದರ್ಯ ಸ್ಪರ್ಧೆ ಅಂತಿಮ ಸುತ್ತಿನಲ್ಲಿ ಕ್ಯಾಟ್ ವಾಕ್ ನಡೆಸಲಿದ್ದಾರೆ. ವಿಶ್ವದ ಸದೃಢಕಾಯದ ಯುವಕರಿಗಾಗಿ ನಡೆಯುವ ಈ ವಿಶಿಷ್ಟ ಸ್ಪರ್ಧೆ ವರ್ಷದಿಂದ ವರ್ಷ ಹೆಚ್ಚೆಚ್ಚು ಜನಪ್ರಿಯವಾಗುತ್ತಿದ್ದು, ಕಿರೀಟಧಾರಿಯ ಘೋಷಣೆಗೆ ಜಗತ್ತಿನಾದ್ಯಂತ ಭಾರೀ ಕುತೂಹಲ ಮೂಡಿದೆಯಂತೆ.

ಮಹಿಳೆಯರಿಗಾಗಿ ಸೌಂದರ್ಯ ಸ್ಪರ್ಧೆಗಳು ನಡೆಯುತ್ತಿವೆ ಎಂದಾದರೆ ಪುರುಷರೂ ಕೂಡ ಅದಕ್ಕೆ ಅರ್ಹರಾಗಿದ್ದಾರೆ. ಈಗ ಪುರುಷರೂ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ ಎಂದು ಈ ಸೌಂದರ್ಯ ಸ್ಪರ್ಧೆಯ ನಿರೂಪಕ ಕ್ರಿಸ್ಟಿನ್ ಹುವಾಂಗ್ ಹೇಳುತ್ತಾರೆ.

ಮಹಿಳೆಯರ ಸ್ಪರ್ಧೆಗಳ ಬಗ್ಗೆ ನೀವು ಪತ್ರಿಕೆಗಳಲ್ಲಿ ನಕಾರಾತ್ಮಕ ವಿಮರ್ಶೆಗಳನ್ನು ಕಾಣಬಹುದು. ಆದರೆ ನಮ್ಮದು ಹಾಗಲ್ಲ. ಇಲ್ಲಿ ಖಂಡಿತಾ ಮಡಿವಂತಿಕೆಯಿರುತ್ತದೆ ಎಂದು ಅವರು ತಿಳಿಸಿದ್ದಾರೆ.

'ಮಿಸ್ಟರ್ ಇಂಟರ್ನ್ಯಾಷನಲ್' ಎಂಬ ಈ ಜಾಗತಿಕ ಪುರುಷರ ಸೌಂದರ್ಯ ಸ್ಪರ್ಧೆಯನ್ನು 'ಮಿಸ್ಟರ್ ಸಿಂಗಾಪುರ್ ಆರ್ಗನೈಸೇಷನ್' ಎಂಬ ಸಂಸ್ಥೆ 2006ರಿಂದ ನಡೆಸುತ್ತಿದೆ. ಇಲ್ಲಿ ಎಚ್ಐವಿ/ಏಡ್ಸ್ ಬಗ್ಗೆ ಜಾಗೃತಿ, ಅರಿವನ್ನು ಮೂಡಿಸುವ ಯತ್ನ ನಡೆಸಲಾಗುತ್ತಿದೆ.

ಈ ಬಾರಿಯ ಸ್ಪರ್ಧೆಯಲ್ಲಿ ರಷ್ಯನ್ ಭಾಷೆ ಮಾತನಾಡುವ ಅಂಗೋಲದ 19ರ ಹರೆಯದ ಜೆಲ್ಸನ್ ಕ್ವಿಂಟಾಸ್, ಸಂಗೀತಾಭ್ಯಾಸ ನಡೆಸುತ್ತಿರುವ 20ರ ಬೊಲಿವಿಯಾದ ಬ್ರೂನೋ ಕೆಟ್ಟೆಲ್, 22ರ ಹರೆಯದ ಸಿಂಗಾಪುರ ವೈದ್ಯಕೀಯ ವಿಜ್ಞಾನಿ ನೆಲ್ಸನ್ ಲೀ ಮುಂತಾದವರು ಪ್ರಮುಖರು.
ಸಂಬಂಧಿತ ಮಾಹಿತಿ ಹುಡುಕಿ