ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಛೇ! ಹ್ಯಾಡ್ಲಿ ನಮ್ಮ ಏಜೆಂಟ್ ಅಲ್ಲವೇ ಅಲ್ಲ: ಸಿಐಎ (Mumbai attacks | Headley | CIA | Pakistan | America | Lashkar-e-Taiba)
Bookmark and Share Feedback Print
 
ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆಯಾಗಿರುವ ಹಾಗೂ ಮುಂಬೈ ದಾಳಿಯ ಶಂಕಿತ ಉಗ್ರ ಡೇವಿಡ್ ಕೊಲೆಮನ್ ಹ್ಯಾಡ್ಲಿ ಅಮೆರಿಕ ಗುಪ್ತಚರ ಇಲಾಖೆಯ ಮಾಹಿತಿದಾರ ಎಂಬ ವರದಿಯನ್ನು ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ (ಸಿಐಎ) ಗುರುವಾರ ಸಾರಸಗಟಾಗಿ ತಳ್ಳಿಹಾಕಿದೆ.

ಹ್ಯಾಡ್ಲಿ ವಿರುದ್ಧ ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡಲಾರೆ, ಆದರೆ ಆದರೆ ಆತ ಸಿಐಎ ಜೊತೆ ಕಾರ್ಯನಿರ್ವಹಿಸಿದ್ದ ಎಂಬ ಮಾಹಿತಿ ಸಂಪೂರ್ಣ ಸುಳ್ಳು ಎಂದು ಸಿಐಎ ವಕ್ತಾರ ಮಾರೈ ಇ ಹಾರ್ಫ್ ಸುದ್ದಿಸಂಸ್ಥೆಯೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಡೇವಿಡ್ ಹ್ಯಾಡ್ಲಿ ಜೊತೆ ಸಿಐಎಗೆ ನಿಕಟ ಸಂಪರ್ಕ ಇದೆಯೇ ಎಂಬ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರಿಸಿದರು. ಆತ ಸಿಐಎ ಜೊತೆ ದಶಕಗಳ ಕಾಲ ಮಾಹಿತಿದಾರನಾಗಿ ಕಾರ್ಯನಿರ್ವಹಿಸಿದ್ದ ಎಂಬ ಅಂಶ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.

ಮುಂಬೈ ಭಯೋತ್ಪಾದನೆ ದಾಳಿಯಲ್ಲಿ ಕೈವಾಡ ಇದೆ ಎಂಬ ಶಂಕೆ ಮೇಲೆ ಬಂಧಿತನಾಗಿರುವ ಪಾಕಿಸ್ತಾನಿ ಮೂಲದ ಅಮೆರಿಕದ ಡೇವಿಡ್ ಕೊಲೆಮನ್ ಹ್ಯಾಡ್ಲಿಯನ್ನು ಮಾದಕ ದ್ರವ್ಯ ಸಾಗಾಟ ಆರೋಪದಲ್ಲಿ ಅಮೆರಿಕ ಎರಡು ಬಾರಿ ಬಂಧಿಸಿತ್ತಾದರೂ ಕೂಡ, ಆತ ಎಫ್‌ಬಿಐ ನಂಬಿಕಾರ್ಹ ಮಾಹಿತಿದಾರ ಎಂಬ ನೆಲೆಯಲ್ಲಿ ಬಿಡುಗಡೆಗೊಳಿಸಿರುವುದಾಗಿ ವರದಿಯೊಂದು ಬಹಿರಂಗಪಡಿಸಿತ್ತು.

ಮುಂಬೈ ದಾಳಿಯಲ್ಲಿ ಕೈವಾಡವಿದೆ ಎಂದು ಶಂಕಿಸಲಾಗುತ್ತಿರುವ ಡೇವಿಡ್ ಕೊಲೆಮನ್ ಹ್ಯಾಡ್ಲಿ(49)ಯನ್ನು ಕಳೆದ ತಿಂಗಳು ಅಮೆರಿಕದಲ್ಲಿ ಎಫ್‌ಬಿಐ ಅಧಿಕಾರಿಗಳು ಬಂಧಿಸಿದ್ದರು. ಈತನಿಗೆ ಲಷ್ಕರ್ ಇ ತೊಯ್ಬಾ ಜೊತೆ ನಂಟು ಇದೆ ಎಂದು ಹೇಳಲಾಗಿತ್ತು.

ಇದೀಗ ಉಗ್ರಗಾಮಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಬಂಧಿತನಾಗಿರುವ ಹ್ಯಾಡ್ಲಿ ಡ್ರಗ್ ಎನ್‌ಫೋರ್ಸ್‌ಮೆಂಟ್ ಆಡ್ಮಿನಿಸ್ಟ್ರೇಶನ್‌ ಜೊತೆ ಕಳೆದ ಹತ್ತು ವರ್ಷಗಳಿಂದ ಮಾಹಿತಿದಾರನಾಗಿ ಕಾರ್ಯನಿರ್ವಹಿಸಿರುವುದಾಗಿ ವರದಿ ತಿಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ