ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯೆಮೆನ್ ಸೈನಿಕರ ದಾಳಿಗೆ 34ಅಲ್ ಖಾಯಿದಾ ಉಗ್ರರು ಬಲಿ (Arhab | Yemen | Defence Ministry | Al-Qaeda | Sanaa)
Bookmark and Share Feedback Print
 
ದೇಶದಲ್ಲಿ ಭದ್ರತೆಗೆ ತಲೆನೋವಾಗಿ ಪರಿಣಮಿಸಿರುವ ಅಲ್ ಖಾಯಿದಾದ ಸುಮಾರು 34ಉಗ್ರರು ಯೆಮೆನಿ ಭದ್ರತಾ ಪಡೆಯ ದಾಳಿಗೆ ಬಲಿಯಾಗಿದ್ದು, 17ಮಂದಿಯನ್ನು ಸೆರೆ ಹಿಡಿದಿರುವುದಾಗಿಯೂ ರಕ್ಷಣಾ ಸಚಿವಾಲಯ ತಿಳಿಸಿದೆ.

ರಾಜಧಾನಿಯ ಹಲವು ಪ್ರದೇಶಗಳಲ್ಲಿ ಗುರುವಾರ ಅಲ್ ಖಾಯಿದಾ ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ 34ಮಂದಿ ಸಾವನ್ನಪ್ಪಿದ್ದು, ಹಲವರನ್ನು ಬಂಧಿಸಲಾಗಿದೆ. ಬಂಧಿತರನ್ನು ತೀವ್ರ ವಿಚಾರಣೆ ಗುರಿಪಡಿಸಲಾಗಿದೆ ಎಂದು ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ದಕ್ಷಿಣ ಅಬ್ಯಾನ್ ಪ್ರದೇಶ, ನೆರೆಯ ಜಿಲ್ಲೆಗಳು ಹಾಗೂ ರಾಜಧಾನಿ ಸಾನಾ ವ್ಯಾಪ್ತಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯದ ವೆಬ್‌ಸೈಟ್ ವರದಿಯಲ್ಲಿ ವಿವರಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ