ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಾಗತಿಕ ತಾಪಮಾನ: ಶ್ರೀಮಂತ ದೇಶಗಳಿಂದ ಮೋಸ (UN | Copenhagen | Climate Change | global emissions)
Bookmark and Share Feedback Print
 
ಜಾಗತಿಕ ತಾಪಮಾನ ವಿಷಯಕ್ಕೆ ಸಂಬಂಧಿಸಿದಂತೆ ಕೈಗಾರಿಕೋದ್ಯಮ ದೇಶಗಳು ಜಾಗತಿಕವಾಗಿಯೇ ಮೋಸ ಮಾಡಿರುವ ಅಂಶ ಬಯಲಾಗಿದೆ. ಹವಾಮಾನ ವೈಪರೀತ್ಯ ತಡೆಯುವ ಹಿನ್ನೆಲೆಯಲ್ಲಿ ಡಿಸೆಂಬರ್ 15ರಂದು ವಿಶ್ವಸಂಸ್ಥೆ ಸಿದ್ದಪಡಿಸಿರುವ ನಡಾವಳಿಯ ಯೋಜನೆಯ ದಾಖಲೆಯಲ್ಲಿ ಈ ವಿಷಯ ಜಗಜ್ಜಾಹೀರಾಗಿದೆ.

ಹವಾಮಾನ ವೈಪರೀತ್ಯ ತಡೆಯುವ ನಿಟ್ಟಿನಲ್ಲಿ ಕೋಪನ್‌ಹೇಗನ್‌ನಲ್ಲಿ ನಡೆದ ಶೃಂಗಸಭೆ ಕೊನೆಗೂ ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿದೆ.ಅಲ್ಲದೇ, ಶ್ರೀಮಂತ ರಾಷ್ಟ್ರಗಳು ಅಭಿವೃದ್ಧಿಶೀಲ ದೇಶಗಳ ಮೇಲೆ ಕ್ಯೋಟೊ ನಿಯಮಾವಳಿಯನ್ನು ಬಲವಂತವಾಗಿ ಹೇರುವುದಕ್ಕೆ ಭಾರತ, ಚೀನಾ, ಆಫ್ರಿಕಾ ಸೇರಿದಂತೆ ಹಲವು ದೇಶಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಏತನ್ಮಧ್ಯೆ ಹವಾಮಾನ ವೈಪರೀತ್ಯ ತಡೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಸಿದ್ದಪಡಿಸಿರುವ ತಿದ್ದುಪಡಿಯ ಹೊಸ ಕರಡು ಕುರಿತು 192ರಾಷ್ಟ್ರಗಳಿಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿವೆ.

ವಿಶ್ವಸಂಸ್ಥೆಯ ಜಾಗತಿಕ ಗುಂಪಿನ ವಿಜ್ಞಾನಿಗಳು(ಐಪಿಸಿಸಿ) ಈಗಾಗಲೇ ಕೈಗಾರಿಕೋದ್ಯಮ ತಲೆ ಎತ್ತುವ ಮುನ್ನವೇ ಜಾಗತಿಕ ತಾಪಮಾನ 2ಡಿಗ್ರಿಗಿಂತಲೂ ಹೆಚ್ಚಾಗಿ ಏರುತ್ತಿರುವುದಾಗಿ ಎಚ್ಚರಿಸಿತ್ತು. ಆದರೆ ಶ್ರೀಮಂತ ದೇಶಗಳು ಹವಾಮಾನ ವೈಪರೀತ್ಯ ತಡೆಗೆ ಸಂಬಂಧಿಸಿದಂತೆ ಯಾವುದೇ ಕಟ್ಟನಿಟ್ಟಿನ ಕ್ರಮ ಕೈಗೊಂಡಿರಲಿಲ್ಲವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ