ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲೆಬನಾನ್: ಹಡಗು ಮುಳುಗಿ 70ಮಂದಿ ಜಲಸಮಾಧಿ? (German mine | Cargo | ship | sinks | Lebanon | UNIFIL)
Bookmark and Share Feedback Print
 
ಬಿರುಗಾಳಿ ವಾತಾವರಣದಿಂದಾಗಿ ಸರಕು ಸಾಗಿಸುತ್ತಿದ್ದ ಹಡಗೊಂದು ಲೆಬನಾನ್ ಕರಾವಳಿಯಲ್ಲಿ ಮುಳುಗಿದೆ. ಹಡಗಿನಲ್ಲಿ 83ಮಂದಿ ಸಿಬ್ಬಂದಿಗಳಿದ್ದು, 12ಮಂದಿಯನ್ನು ರಕ್ಷಿಸಿದ್ದು, ಉಳಿದ 71ಮಂದಿ ಜಲಸಮಾಧಿಯಾಗಿರಬೇಕೆಂದು ಶಂಕಿಸಲಾಗಿದೆ.

ಸಮುದ್ರಾಳದಲ್ಲಿ ಮುಳುಗಿದ ಹಡಗಿನಲ್ಲಿದ್ದ ಸಿಬ್ಬಂದಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಲಿಬನಾನ್ ನೌಕಾಪಡೆ ಮತ್ತು ವಿಶ್ವಸಂಸ್ಥೆ ಶಾಂತಿಪಾಲನ ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರಕನ್ನು ಸಾಗಿಸುತ್ತಿದ್ದ ಈ ಹಡಗು ಉರಗ್ವೆಯಿಂದ ಸಿರಿಯಾನ್ ಬಂದರಿನತ್ತ ತೆರಳುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಲೆಬನಾನ್ ನಗರದಿಂದ ಸುಮಾರು 17ಕಿ.ಮೀ.ದೂರದಲ್ಲಿರುವ ಟ್ರೈಪೋಲಿ ಕರಾವಳಿ ಪ್ರದೇಶದಲ್ಲಿ ಹಡಗು ಮುಳುಗಿದೆ. ಕರಾವಳಿ ಪ್ರದೇಶದಲ್ಲಿ ಏಕಾಏಕಿ ಬಿರುಗಾಳಿ ಬೀಸಿದ್ದರಿಂದ ಹಡಗು ಮುಳಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಹಡಗಿನಲ್ಲಿದ್ದವರಲ್ಲಿ ಈಗಾಗಲೇ 12ಮಂದಿಯನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಲೆಬನಾನ್ ಆರ್ಮಿ ಅಧಿಕಾರಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ