ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಂಬಂಧವಿಲ್ಲ ಎಂದು ಸುಳ್ಳು ಹೇಳಿದ್ದ ಕ್ಲಿಂಟನ್: ಮೋನಿಕಾ (Bill Clinton | Monica Lewinsky | US president | White House)
Bookmark and Share Feedback Print
 
ನನ್ನ ಜತೆ ಯಾವುದೇ ಸಂಬಂಧವಿಲ್ಲ ಎಂದು ದೋಷಾರೋಪಣೆ ವಿಚಾರಣೆ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಸುಳ್ಳೇಸುಳ್ಳು ಪ್ರತಿಜ್ಞೆ ಮಾಡಿದ್ದರು ಎಂದು ಮಾಜಿ ಪ್ರೇಯಸಿ ಮೋನಿಕಾ ಲೆವೆನ್‌ಸ್ಕಿ ಆರೋಪ ಮಾಡಿದ್ದಾರೆ.

ಶ್ವೇತಭವನದ ಒಡೆಯರಾಗಿದ್ದ ಕ್ಲಿಂಟನ್-ಮೋನಿಕಾ ನಡುವಿನ ಸಂಬಂಧದ ಕುರಿತು 11 ವರ್ಷಗಳ ಬಳಿಕ ಮತ್ತೆ ಹೊಗೆಯಾಡಲಾರಂಭಿಸಿದೆ. ಇದಕ್ಕೆ ಕಾರಣವಾಗಿರುವುದು ಒಂದು ಪುಸ್ತಕ.

ಹಿರಿಯ ನ್ಯಾಯಾಧೀಶರೆದುರು ಆರೋಪದ ವಿಚಾರಣೆ ನಡೆಯುತ್ತಿದ್ದಾಗ ಅಧ್ಯಕ್ಷ ಕ್ಲಿಂಟನ್ ತಮ್ಮ ಸಂಬಂಧದ ಬಗ್ಗೆ ಸುಳ್ಳು ಹೇಳಿದ್ದರು ಎಂದು 'ಅಮೆರಿಕಾದ ಸಚ್ಚಾರಿತ್ರ್ಯದ ಸಾವು' ಎಂಬ ಪುಸ್ತಕ ಬರೆದಿರುವ ಕಾನೂನು ಪ್ರೊಫೆಸರ್ ಕೆನ್ ಗೋರ್ಮ್‌ಲೇ ಅವರಿಗೆ ಕಳುಹಿಸಿದ್ದ ಇ-ಮೇಲ್‌ನಲ್ಲಿ ಮೋನಿಕಾ ತಿಳಿಸಿದ್ದರು.

ಅವರ ಹೇಳಿಕೆಯಲ್ಲಿ ಯಾವುದೇ ಪ್ರಾಮಾಣಿಕತೆ ಅಥವಾ ಸತ್ಯಾಂಶಗಳಿರಲಿಲ್ಲ. ಅವರು ಕೇಳಿದ್ದ ನಿರ್ದಿಷ್ಟ ಮತ್ತು ವಿವರವಾದ ಪ್ರಶ್ನೆಗಳಿಗೆ ಕ್ಲಿಂಟನ್ ಸುಳ್ಳೇಸುಳ್ಳು ಉತ್ತರಗಳನ್ನು ನೀಡಿದ್ದರು ಎಂದು ಮೋನಿಕಾ ತಿಳಿಸಿದ್ದರೆಂದು ಲೇಖಕಿ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.

ವೈಟ್‌ವಾಟರ್ ತನಿಖೆಯ ಕಾರಣದಿಂದಾಗಿ ಜೈಲುವಾಸ ಅನುಭವಿಸಿದ್ದವರಲ್ಲೊಬ್ಬರಾದ ಸೂಸಾನ್ ಮೆಕ್‌ಡಾಗಲ್ ಅವರೊಂದಿಗೆ ಕೂಡ ಅಧ್ಯಕ್ಷ ಕ್ಲಿಂಟನ್ ಸುದೀರ್ಘಾವಧಿಯ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಫೆಬ್ರವರಿಯಲ್ಲಿ ಬಿಡುಗಡೆಯಾಗಲಿರುವ 769 ಪುಟಗಳ ಈ ಪುಸ್ತಕದಲ್ಲಿ ವಿವರಿಸಲಾಗಿದೆ.

ವೆಬ್‌ಸೈಟ್ ಒಂದಕ್ಕೆ ಸಂದರ್ಶನ ನೀಡಿರುವ ಲೇಖಕರು, ಈ ಸಂಬಂಧ ತಾನು ಯಾವುದೇ ಪುರಾವೆಗಳಿಲ್ಲ ಎಂದಿದ್ದಾರೆ.

ಆದರೆ ತಾನು ಸಾರ್ವಜನಿಕರಿಗೆ ಸುಲಭವಾಗಿ ಕೈಗೆ ಸಿಗದ ದಾಖಲೆಗಳನ್ನು ಮತ್ತು ಹಲವಾರು ವಿಶೇಷ ಸಂದರ್ಶನಗಳನ್ನು ನಡೆಸಿದ ನಂತರ ಇದನ್ನು ಕಂಡುಕೊಂಡಿದ್ದು, ನನ್ನ ಹೇಳಿಕೆ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ