ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿವಾದ ಸೃಷ್ಟಿಸಿದ ಕನ್ಯಾ ಮೇರಿ-ಜೋಸೆಫ್ ಬೆತ್ತಲೆ ಚಿತ್ರ (Virgin Mary | Joseph | Christian | New Zealand)
Bookmark and Share Feedback Print
 
ವೆಲ್ಲಿಂಗ್ಟನ್‌ನ ಚರ್ಚ್‌ವೊಂದು ತನ್ನ ಸೂಚನಾ ಫಲಕದಲ್ಲಿ ಬೆತ್ತಲೆ ಕನ್ಯಾ ಮೇರಿ ಮತ್ತು ಜೋಸೆಫ್ ಮಂಚದಲ್ಲಿ ಜತೆಯಾಗಿ ಮಲಗಿರುವ ಕಲಾಚಿತ್ರವೊಂದನ್ನು ತೂಗು ಹಾಕಿದ ಹಿನ್ನಲೆಯಲ್ಲಿ ನ್ಯೂಜಿಲೆಂಡ್‌ನ ಸಂಪ್ರದಾಯವಾದಿ ಕ್ರಿಶ್ಚಿಯನ್ನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೀರಾ ಬೇಸರದಿಂದಿರುವ ಜೋಸೆಫ್ ಮಂಚದಲ್ಲಿ ಮೇರಿಯ ಪಕ್ಕ ಮಲಗಿರುವ ಚಿತ್ರವನ್ನು ಪೋಸ್ಟರ್‌ನಲ್ಲಿ ಬಿಡಿಸಲಾಗಿದೆ. ಈ ಚಿತ್ರದಲ್ಲಿ ಕನ್ಯಾ ಮೇರಿ ಸ್ವರ್ಗದತ್ತ ದಿಟ್ಟಿಸುತ್ತಿರುವಂತೆ ಚಿತ್ರಿಸಲಾಗಿದೆ. ಅಲ್ಲದೆ ಚಿತ್ರದ ಮೇಲ್ಭಾಗದಲ್ಲಿ 'ಬಡ ಜೋಸೆಫ್. ದೇವರನ್ನು ಹಿಂಬಾಲಿಸುವುದು ಕಠಿಣ ಕೆಲಸ' ಎಂದು ಬರೆಯಲಾಗಿದೆ.

ಆಕ್ಲೆಂಡ್‌ನಲ್ಲಿನ ಅಂಗ್ಲಿಕನ್ ನಗರದ ಸೈಂಟ್ ಮ್ಯಾಥ್ಯೂ ಚರ್ಚ್ ಹೊರಗಡೆ ಹಾಕಲಾಗಿರುವ ಸೂಚನಾ ಫಲಕದಲ್ಲಿ ಗುರುವಾರ ಈ ಚಿತ್ರವನ್ನು ಹಾಕಲಾಗಿತ್ತು.

ಜೀಸಸ್ ಕ್ರಿಸ್ತನ ಹುಟ್ಟು ಹೇಗಾಯಿತು ಎಂಬುದನ್ನು ಬಿಂಬಿಸುವ ಕಾಲ್ಪನಿಕ ಚಿತ್ರ ಇದಾಗಿದೆ ಎಂದು ಈ ಚರ್ಚ್‌ನ ಪಾದ್ರಿ ಅರ್ಚ್‌ಡೆಕನ್ ಗ್ಲಿನ್ ಕಾರ್ಡಿ ಪ್ರತಿಕ್ರಿಯಿಸಿದ್ದಾರೆ.

ಬೈಬಲ್ ಪ್ರಕಾರ ದೇವತೆಯೊಬ್ಬಳು ಬಂದು 'ನೀನು ದೇವರ ಮಗನಿಗೆ ಜನ್ಮ ನೀಡಲಿದ್ದಿ' ಎಂದು ಕನ್ಯಾ ಮೇರಿಗೆ ಹೇಳಿದ ನಂತರ ಆಕೆ ಗರ್ಭಿಣಿಯಾಗಿದ್ದರು.

ಇದು ಬೈಬಲ್‌ನಲ್ಲಿರುವ ಜೀಸಸ್ ಹುಟ್ಟಿನ ವ್ಯಾಖ್ಯಾನಕ್ಕೆ ಅಕ್ಷರಶಃ ಸವಾಲು ನೀಡುತ್ತದೆ. ಜೀಸಸ್ ಸೃಷ್ಟಿಯಾದ ರೀತಿಯ ಜನ ಮಾತನಾಡಿಕೊಳ್ಳುತ್ತಿರುವ ಕ್ರಿಸ್ಮಸ್ ಕಥೆಗಿದು ಸವಾಲಾಗಿದೆ ಎಂದು ಪಾದ್ರಿ ವಿವರಣೆ ನೀಡಿದ್ದಾರೆ.

ಸಾಂಪ್ರದಾಯಿಕ ಕ್ರಿಶ್ಚಿಯನ್ನರು ಈ ಪೋಸ್ಟರ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ 2,000 ವರ್ಷಗಳ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮೇರಿ ಯಾವತ್ತೂ ಕನ್ಯೆ ಮತ್ತು ಜೀಸಸ್ ದೇವರ ಮಗ. ಕ್ರಿಸ್ತ ಜೋಸೆಫ್‌ರ ಪುತ್ರನಲ್ಲ. ಈ ಪೋಸ್ಟರ್ ಅಸಂಗತವಾಗಿದ್ದು, ಕನ್ಯಾ ಮೇರಿ ಮತ್ತು ಕ್ರಿಸ್ತನಿಗೆ ಅಗೌರವ ತೋರಿಸಲಾಗಿದೆ ಎಂದು ಹೇಳಿದ್ದಾರೆ.

ಚರ್ಚ್ ಹೊರಗಡೆ ಹಾಕಲಾಗಿದ್ದ ಈ ಪೋಸ್ಟರಿಗೆ ಈಗಾಗಲೇ ಆಕ್ರೋಶಿತ ಕ್ರಿಶ್ಚಿಯನ್ನರು ಪೇಂಟ್ ಬಳಿದು ಬಹುತೇಕ ಅಳಿಸಿ ಹಾಕಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ