ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜರ್ದಾರಿಯವರ 'ಸುರ್ರೇ ಮಹಲ್' ತನಿಖೆ ನಡೆಸಿ: ಸುಪ್ರೀಂ (Pakistan | Asif Ali Zardari | Rehman Malik | Yousaf Raza Gilani)
Bookmark and Share Feedback Print
 
ಪಾಕಿಸ್ತಾನ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿಯವರಿಗೆ ದಿನದಿಂದ ದಿನಕ್ಕೆ ಸಮಸ್ಯೆಗಳು ಒಂದರ ಮೇಲೊಂದರಂತೆ ಎರಗುತ್ತಿದ್ದು, ಅವರ ಮಾಲಕತ್ವದ ಬ್ರಿಟನ್‌ನ 4 ಮಿಲಿಯನ್ ಪೌಂಡ್ ಮೌಲ್ಯದ ಎಸ್ಟೇಟ್ ಹೇಗೆ ಖರೀದಿಸಿದರು ಎಂಬುದನ್ನು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

2007ರ ರಾಷ್ಟ್ರೀಯ ವ್ಯಾಜ್ಯ ವಿಲೇವಾರಿ ಮಸೂದೆಯ ಲಾಭ ಪಡೆದುಕೊಂಡಿದ್ದ ಜರ್ದಾರಿ ತನ್ನ ಮೇಲಿನ ಅಕ್ರಮ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರ ಪ್ರಕರಣಗಳಿಂದ ಕ್ಷಮಾದಾನ ಪಡೆದುಕೊಂಡಿದ್ದರು. ಆದರೆ ಇದನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಕಳೆದೆರಡು ದಿನಗಳ ಹಿಂದಷ್ಟೇ ರದ್ದುಗೊಳಿಸಿ, ಪ್ರಕರಣಕ್ಕೆ ಮರುಜೀವ ನೀಡಿತ್ತು.

ಈ ಹಿನ್ನಲೆಯಲ್ಲಿ ಪಾಕಿಸ್ತಾನದ ಸುಮಾರು 300 ಪ್ರಮುಖ ರಾಜಕಾರಣಿಗಳು ಸೇರಿದಂತೆ 8,000 ಮಂದಿ ನ್ಯಾಯಾಲಯದ ವಿಚಾರಣೆಗೊಳಪಡಬೇಕಾಗಿದೆ. ಅಧ್ಯಕ್ಷ ಜರ್ದಾರಿ ಮತ್ತು ಆಂತರಿಕ ವ್ಯವಹಾರಗಳ ಸಚಿವ ರೆಹಮಾನ್ ಮಲಿಕ್ ಪ್ರಮುಖರು. ಈಗಾಗಲೇ ಮಲಿಕ್ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಅದರ ಬೆನ್ನಿಗೆ ಜರ್ದಾರಿ ಲಂಡನ್‌ನಲ್ಲಿ ಹೊಂದಿರುವ 365 ಎಕರೆ ವಿಸ್ತಾರವಿರುವ 'ಸುರ್ರೇ ಮಹಲ್' ಖರೀದಿಗೆ ಹಣದ ಮೂಲ ಯಾವುದು ಎಂಬುದನ್ನು ತನಿಖೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯ ಸಂಬಂಧಪಟ್ಟವರಿಗೆ ಆದೇಶ ನೀಡಿದೆ.

ಜರ್ದಾರಿ 90ರ ದಶಕದಲ್ಲಿ 'ಟ್ಯೂಡರ್ ರಾಕ್‌ವುಡ್ ಪಾರ್ಕ್'ನ್ನು ಖರೀದಿಸಿದ್ದರು. ಅದನ್ನು ಬಳಿಕ ವಿರೋಧ ಪಕ್ಷದವರು 'ಸುರ್ರೇ ಮಹಲ್' ಎಂದೇ ಕರೆಯಲಾರಂಭಿಸಿದ್ದರು.

ಅಲ್ಲದೆ ಜರ್ದಾರಿಯವರು ಈ 20 ಕೊಠಡಿಗಳಿರುವ ಬೃಹತ್ ಬಂಗಲೆಯ ನವೀಕರಣಕ್ಕಾಗಿ 3,00,000 ಪೌಂಡ್‌ಗಳನ್ನು ಖರ್ಚು ಮಾಡಿದ್ದಾರೆ. ಇಲ್ಲೊಂದು ಕುದುರೆ ರೇಸಿನ ಖಾಸಗಿ ಪೋಲೋ ಫೀಲ್ಡನ್ನೂ ನಿರ್ಮಿಸಲಾಗಿದೆ ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.

ಆಸ್ತಿ ಖರೀದಿಗಾಗಿ ಕಪ್ಪು ಹಣವನ್ನು ಬಳಸಲಾಗಿದೆಯೇ ಎಂಬುದನ್ನು ಪರಿಶೀಲಿಸುವ ಸಲುವಾಗಿ ಪ್ರಕರಣವನ್ನು ಮರು ತನಿಖೆಗೊಳಪಡಿಸುವಂತೆ ಸ್ವಿಜರ್ಲೆಂಡ್ ಸರಕಾರವನ್ನು ಕೇಳಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ