ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹವಾಮಾನ ವೈಪರೀತ್ಯ ತಡೆ: ಒಬಾಮಾ ಒಪ್ಪಂದಕ್ಕೆ ನಕಾರ (China | Obama | Copenhagen | global warming | India)
Bookmark and Share Feedback Print
 
ND
ಜಾಗತಿಕವಾಗಿ ಕಗ್ಗಂಟಾಗಿ ಪರಿಣಮಿಸಿರುವ ಹವಾಮಾನ ವೈಪರೀತ್ಯ ತಡೆ ಕುರಿತಂತೆ ಅಮೆರಿಕ ಹಾಗೂ ಇತರ ನಾಲ್ಕು ಪ್ರಮುಖ ಶ್ರೀಮಂತ ದೇಶಗಳ ಕರಾರನ್ನು ಭಾರತ ಸೇರಿದಂತೆ ಹಲವು ಅಭಿವೃದ್ಧಿಶೀಲ ದೇಶಗಳು ತಿರಸ್ಕರಿಸಿವೆ.

ಜಾಗತಿಕ ಹವಾಮಾನ ವೈಪರೀತ್ಯ ತಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ನಿಯಮಾವಳಿಗೆ ಅದು ವಿರುದ್ಧವಾಗಿದೆ ಎಂದು ಅಭಿವೃದ್ಧಿಶೀಲ ದೇಶಗಳು ಗಂಭೀರವಾಗಿ ಆರೋಪಿಸಿವೆ.

1997ರಲ್ಲಿ ಮೊದಲ ಬಾರಿಗೆ ಹವಾಮಾನ ವೈಪರೀತ್ಯ ತಡೆ ಕುರಿತಂತೆ ನಡೆದ ವಿಶ್ವಸಂಸ್ಥೆ ಶೃಂಗಸಭೆಯಲ್ಲಿ ಕ್ಯೋಟೊ ನಿಯಮಾವಳಿಗೆ ಅಮೆರಿಕ, ಚೀನಾ, ಭಾರತ, ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲ್ ಸೇರಿದಂತೆ 120ದೇಶಗಳ ಮುಖಂಡರು ಸಹಮತ ಸೂಚಿಸಿದ್ದರು.

ಆದರೆ ಇದೀಗ ಕ್ಯೋಟೊ ನಿಯಮಾವಳಿಯನ್ನು ಶ್ರೀಮಂತ ದೇಶಗಳು ಬಲವಂತವಾಗಿ ಅಭಿವೃದ್ಧಿಶೀಲ ದೇಶಗಳ ಮೇಲೆ ಹೇರುತ್ತಿರುವುದನ್ನು ಭಾರತ, ಚೀನಾ ಸೇರಿದಂತೆ ಹಲವು ದೇಶಗಳು ವಿರೋಧ ವ್ಯಕ್ತಪಡಿಸಿವೆ.

ಹವಾಮಾನ ವೈಪರೀತ್ಯ ತಡೆ ಕುರಿತು ಶುಕ್ರವಾರ ಶ್ರೀಮಂತ ರಾಷ್ಟ್ರಗಳ ನಿಲುವಿನ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಭಾರತ ಮತ್ತು ಚೀನಾ ಇಲ್ಲಿ ನಡೆಯುತ್ತಿರುವ ಅಂತಿಮದಿನದ ಶೃಂಗಸಭೆಯಿಂದ ಹೊರನಡೆಯುವ ಮೂಲಕ ತಮ್ಮ ಅಸಮಾಧಾನ ತೋರ್ಪಡಿಸಿದ್ದವು.

ಶ್ರೀಮಂತ ರಾಷ್ಟ್ರಗಳು ಕ್ಯೋಟೊ ನಿಯಮಾವಳಿಯನ್ನು ಅಭಿವೃದ್ಧಿಶೀಲ ದೇಶಗಳ ಮೇಲೆ ಹೇರಲು ಯತ್ನಿಸುತ್ತಿರುವುದನ್ನು ಭಾರತದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹಾಗೂ ಚೀನಾ ಪ್ರಧಾನಿ ವೆನ್ ಜಿಯಾಬಾವೋ ಅವರು ತೀವ್ರವಾಗಿ ವಿರೋಧಿಸಿದ್ದರು. ಅಲ್ಲದೇ ಹಿಂದುಳಿದ ರಾಷ್ಟ್ರಗಳ ಮೇಲೆ ಶ್ರೀಮಂತ ದೇಶಗಳು ತಮ್ಮ ಹಿಡಿತ ಸಾಧಿಸಲು ಹೊರಟಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

'ಒಟ್ಟಾರೆ ಹವಾಮಾನ ವೈಪರೀತ್ಯ ತಡೆ ಕುರಿತು ನಡೆಸುತ್ತಿರುವ ಶೃಂಗಸಭೆ ವಿಫಲವಾಗಿದೆ' ಎಂದಿರುವ ಮನಮೋಹನ್ ಸಿಂಗ್, ಜಾಗತಿಕ ತಾಪಮಾನ ಕುರಿತಂತೆ ಒಮ್ಮತಾಭಿಪ್ರಾಯದ ಮಾತುಕತೆಯನ್ನು 2010ರೊಳಗೆ ಮುಕ್ತಾಯಗೊಳಿಸುವಂತೆ ಅವರು ಈ ಸಂದರ್ಭದಲ್ಲಿ ಕರೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ