ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೇಡು: ಹಂದಿಗೇ ಹಂದಿಜ್ವರ ನೀಡಿದ ಮಾನವ! (H1N1 | bangkok | Swine flu | Thailand)
Bookmark and Share Feedback Print
 
PTI
ಎಚ್‌1ಎನ್‌1 ಸೋಂಕು ಜಾಗತಿಕವಾಗಿ ಸಾಕಷ್ಟು ಅಟ್ಟಹಾಸಗೈಯುವ ಮೂಲಕ ಸಾವಿರಾರು ಮಂದಿ ಬಲಿಯಾಗಿದ್ದರು.ಆದರೆ ಇದೀಗ ಬಂದಿರುವ ಸುದ್ದಿ ಮಾತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಬ್ಯಾಂಕಾಂಕ್‌ನಲ್ಲಿ ಮನುಷ್ಯನಿಂದಲೇ ಹಂದಿಗೆ ಹಂದಿಜ್ವರದ ಸೋಂಕು ಹರಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮನುಷ್ಯನಿಂದಲೇ ಹಂದಿಗೆ ಎಚ್‌1ಎನ್‌1 ಸೋಂಕು ಹರಡಿರುವ ಪ್ರಥಮ ದೂರು ವರದಿಯಾಗಿದೆಂದು ಥೈಲ್ಯಾಂಡ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.!

ಸೆಂಟ್ರಲ್ ಪ್ರೊವಿನ್ಸ್‌ನ ಸಾರಾ ಬುರಿ ಫಾರ್ಮ್‌ನಲ್ಲಿರುವ ಸುಮಾರು 80ಹಂದಿಗಳ ವೈರಸ್ ಅನ್ನು ಕಾಸೆರ್‌ಸಾರ್ಟ್ ಯೂನಿವರ್ಸಿಟಿಯಲ್ಲಿ ಗ್ರೂಪ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿರುವ ಕೃಷಿ ಸಚಿವ ಥಿರಾ ವಾಂಗ್ಸಾಮುಟ್, ಇದರಲ್ಲಿ ಒಂದು ಹಂದಿಗೆ ಎಚ್‌1ಎನ್‌1 ಸೋಂಕು ಇರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಆದರೆ ಮನುಷ್ಯನಿಂದಲೇ ಈ ವೈರಸ್ ಹರಡಿದೆ ಎಂಬುದು ಇನ್ನೂ ಖಚಿತವಾಗಿಲ್ಲ, ಆದರೆ ಪರೀಕ್ಷೆಯ ವರದಿ ಪ್ರಕಾರ ಮನುಷ್ಯನಿಂದ ಹಂದಿಗೆ ಈ ವೈರಸ್ ಹರಡಿರಬೇಕೆಂದು ಸಚಿವರ ಖಾಯಂ ಕಾರ್ಯದರ್ಶಿ ಯೂಕೊಲ್ ಲಿಂಲಾಮ್‌ಥೋಂಗ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ