ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೂಜಿ ಚುಚ್ಚಿ ಮಗುವನ್ನು ಬಲಿ ಕೊಡಲೆತ್ನಿಸಿದ ಮಲತಂದೆ (Brazil | Black magic | ritual killing | needles)
Bookmark and Share Feedback Print
 
ತನ್ನ ಪ್ರೇಯಸಿಯ ಸಲಹೆಯಂತೆ ಮೊದಲ ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಮಲ ತಂದೆಯೊಬ್ಬ ಎರಡು ವರ್ಷ ಪ್ರಾಯದ ಪುಟ್ಟ ಬಾಲಕನೊಬ್ಬನ ದೇಹಕ್ಕೆ ಡಜನ್‌ಗಳಿಗೂ ಹೆಚ್ಚು ಸೂಚಿಗಳನ್ನು ಸೇರಿಸಿ 'ಧಾರ್ಮಿಕ ಬಲಿ' ನೀಡಲು ಯತ್ನಿಸಿದ ಹೇಯ ಕೃತ್ಯವೊಂದು ಬಹಿರಂಗವಾಗಿದೆ.

ಇದೀಗ ಬಾಲಕ ದೇಹದೊಳಗಿದ್ದ 10ಕ್ಕೂ ಹೆಚ್ಚು ಸೂಜಿಗಳಲ್ಲಿ ನಾಲ್ಕನ್ನು ಬ್ರೆಜಿಲ್‌ನ ವೈದ್ಯರು ಹರಸಾಹಸಪಟ್ಟು ಹೊರ ತೆಗೆದಿದ್ದಾರೆ. ಪುಟ್ಟ ಹುಡುಗನ ಎದೆ, ಶ್ವಾಸಕೋಶಗಳ ಪಕ್ಕದಲ್ಲಿ ತೀರಾ ಅಪಾಯವನ್ನೆದುರಿಸುತ್ತಿದ್ದ ಪ್ರದೇಶದಿಂದ ಇವುಗಳನ್ನು ಹೊರತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನಷ್ಟು ಸೂಜಿಗಳು ಬಾಲಕ ದೇಹದಲ್ಲಿರುವುದರಿಂದ ಶಸ್ತ್ರಚಿಕಿತ್ಸೆಗಳು ಮುಗಿದಿಲ್ಲ. ಒಂದು ಹಂತದ ಚಿಕಿತ್ಸೆ ಮಾತ್ರ ಮುಗಿದಿದೆ. ಮುಂದಿನ ದಿನಗಳಲ್ಲಿ ಆತನ ದೇಹಸ್ಥಿತಿಯನ್ನು ನೋಡಿಕೊಂಡು ಮುಂದುವರಿಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ದೇಹದೊಳಗೆ ಸೂಜಿಗಳು ಇನ್ನೂ ಬಾಕಿ ಉಳಿದಿರುವುದರಿಂದ ಮತ್ತು ಈಗ ಮಾಡಿರುವ ಶಸ್ತ್ರಚಿಕಿತ್ಸೆಯಿಂದ ಸೋಂಕು ಉಂಟಾಗುವ ಸಾಧ್ಯತೆಗಳಿವೆ. ಪ್ರಾಣಕ್ಕೆ ತೀರಾ ಸಂಚಕಾರ ತರಬಹುದಾದ ನಾಲ್ಕು ಸೂಜಿಗಳನ್ನಷ್ಟೇ ತೆಗೆಯಲಾಗಿದೆ. ಆದರೂ ಆತನ ಬಗ್ಗೆ ಈಗಲೇ ಏನನ್ನೂ ಹೇಳಲಾಗದು ಎನ್ನುವುದು ವೈದ್ಯರ ಅಭಿಮತ.

ಬಲಿ ಕೊಡಲು ನಿರ್ಧರಿಸಿದ್ದ ಮಲತಂದೆ...
ತಾನು ಮೊದಲ ಹೆಂಡತಿಯ ಮಗುವನ್ನು ಬಲಿ ಕೊಡಲು ಬಯಸಿದ್ದೆ ಎಂದು ಮಗುವಿನ ಮಲತಂದೆ ಹೇಳಿದ್ದಾನೆಂದು ಬ್ರೆಜಿಲ್ ಪೊಲೀಸರು ತಿಳಿಸಿದ್ದಾರೆ.

ಮೊದಲ ಪತ್ನಿಯ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಮಗುವನ್ನು ಈ ರೀತಿ ಬಲಿ ಕೊಡುವಂತೆ ಪ್ರೇಯಸಿ ಹೇಳಿದ ಹಿನ್ನೆಲೆಯಲ್ಲಿ ಮಲತಂದೆ ಇಂತಹ ಹೇಯ ಕೃತ್ಯಕ್ಕಿಳಿದಿದ್ದ.

ಬಾಲಕ ಹೊಟ್ಟೆ ನೋವು ಎಂದು ಒದ್ದಾಡುತ್ತಾ ವಾಂತಿ ಮಾಡುತ್ತಿದ್ದುದನ್ನು ಗಮನಿಸಿದ ತಾಯಿ ಪಕ್ಕದ ಆಸ್ಪತ್ರೆಗೆ ದಾಖಲಿಸಿದ್ದಳು. ಅಲ್ಲಿ ಎಕ್ಸ್-ರೇಗಳನ್ನು ತೆಗೆದು ನೋಡಿದ ಬಳಿಕ ಕತ್ತು, ಕಾಲುಗಳು ಹಾಗೂ ದೇಹದ ಇತರ ಭಾಗಗಳಿಗೆ ಸೂಜಿಯನ್ನು ಚುಚ್ಚಿರುವುದು ಬಹಿರಂಗವಾಗಿತ್ತು.

ಆರು ತಿಂಗಳ ಹಿಂದಷ್ಟೇ ಈ ವ್ಯಕ್ತಿಯನ್ನು ಮದುವೆಯಾಗಿರುವ ಮಗುವಿನ ತಾಯಿಗೆ ಒಟ್ಟು ಆರು ಮಕ್ಕಳು.
ಸಂಬಂಧಿತ ಮಾಹಿತಿ ಹುಡುಕಿ