ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ರಿಟನ್‌ನಲ್ಲೂ 26/11ರ ಮುಂಬೈ ಶೈಲಿಯ ಉಗ್ರರ ದಾಳಿ ಸಂಭವ! (London | Scotland Yard | Mumbai type attacks)
Bookmark and Share Feedback Print
 
ಮುಂದಿನ ವರ್ಷ ಸ್ಕಾಟ್‌ಲ್ಯಾಂಡ್ 26/11ರ ಮುಂಬೈ ಶೈಲಿಯ ಉಗ್ರರ ದಾಳಿಯನ್ನು ಎದುರಿಸಬಹುದಾದ ಸಂಭವವಿದೆ ಎಂದು ಬ್ರಿಟೀಷ್ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂಬೈ ಮುಂದೆ ಲಂಡನ್‌ಗೆ ಬರಲಿದೆ. ಮುಂದಿನ ವರ್ಷದ ಆರಂಭದಲ್ಲೇ ಈ ದಾಳಿಯ ಸಂಭವವಿದೆ ಎಂದು ತನಿಖಾ ದಳದ ನಗರ ಪೊಲೀಸ್ ಭಯೋತ್ಪಾದನಾ ಕಮಾಂಡರ್ ಹೇಳಿದ್ದು, ಕಂಪನಿಗಳು ಈ ಕುರಿತು ಎಚ್ಚರ ವಹಿಸಬೇಕೆಂದು ಕರೆ ನೀಡಿದ್ದಾರೆ.

ದಿ ಸಂಡೇ ಟೈಂಸ್ ವರದಿ ಮಾಡಿರುವಂತೆ, ಸಣ್ಣ ಗುಂಪೊಂದು ಕಟ್ಟಡವೊಂದಕ್ಕೆ ನುಗ್ಗಿ ಮುಂಬೈ ಉಗ್ರರ ದಾಳಿ ಮಾದರಿಯಲ್ಲಿ ಭಾರೀ ಭಯೋತ್ಪಾದನೆ ನಡೆಸುವ ಸಂಭವವಿದೆ ಎಂದು ವರದಿ ಮಾಡಿದೆ.

ಈಗಾಗಲೇ ಬ್ರಿಟೀಷ್ ನಗರ ಪೊಲೀಸರು ರಕ್ಷಣಾ ಫೋರಂಗಳನ್ನು ರಚಿಸಿದ್ದು, ಉಗ್ರರ ದಾಳಿಯ ಕುರಿತು ಮುಂಚಿತವಾಗಿಯೇ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಸಿದ್ಧತೆ ಆರಂಭಿಸಿದ್ದಾರೆ. ಸ್ಥಳಾಯ ಸರ್ಕಾ, ಬ್ಯುಸಿನೆಸ್ ಮುಖಂಡರು, ತುರ್ತು ಸೇವೆಗಳು ಹಾಗೂ ಇತರ ಪ್ರಮುಖ ವಿಭಾಗಗಳನ್ನು ಸಭೆಗೆ ಕರೆದು ಎಚ್ಚರಿಕೆ ಕ್ರಮಗಳನ್ನು ವಿವರಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ