ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಂಧಿತ ಡೇವಿಡ್ ಹೆಡ್ಲಿಯ ವೀಸಾ ದಾಖಲೆ ಪತ್ತೆ (Mumbai Terror | David Hedley)
Bookmark and Share Feedback Print
 
ಮುಂಬೈ ಮೇಲಿನ ದಾಳಿಯಲ್ಲಿ ಪಾಲ್ಗೊಂಡಿದ್ದಾನೆ ಎಂದು ಶಂಕೆಯ ಮೇಲೆ ಬಂಧಿತನಾದ ಡೇವಿಡ್ ಹೆಡ್ಲಿಯ ಮೂಲ ವೀಸಾ ದಾಖಲಾತಿ ಅರ್ಜಿ ಹಾಗೂ ಅದಕ್ಕೆ ಸಂಬಂಧಿಸಿದ ಇತರ ದಾಖಲೆಗಳನ್ನು ಇಲ್ಲಿನ ಭಾರತೀಯ ದೂತವಾಸದ ಕಡತಗಳ ಕೋಣೆಯಿಂದ ಪತ್ತೆಮಾಡಿ ಹೊರ ತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಿಕಾಗೊ ನಿವಾಸಿಯಾದ 48 ವರ್ಷದ ಹೆಡ್ಲಿಯನ್ನು ಅಕ್ಟೋಬರ್ ತಿಂಗಳಲ್ಲಿ ಎಫ್‌ಬಿಐ ಅಧಿಕಾರಿಗಳು ಬಂಧಿಸಿದ್ದರು. ಹೆಡ್ಲಿ ಹಲವಾರು ಬಾರಿ ಭಾರತಕ್ಕೆ ಭೇಟಿ ನೀಡಿ, ಉಗ್ರರು ಮುಂಬೈಯಲ್ಲಿ ಗುರಿಯಾಗಿಸಿಕೊಂಡಿದ್ದ ತಾಣಗಳ ವಿಡಿಯೋ ಚಿತ್ರೀಕರಣ ಮತ್ತು ಚಿತ್ರಗಳನ್ನು ಲಷ್ಕರ್-ಎ-ತೋಯ್ಬಾ ಪರವಾಗಿ ಸೆರೆ ಹಿಡಿದಿದ್ದ ಎಂದು ಆರೋಪಿಸಲಾಗಿದೆ.

ಹೆಡ್ಲಿ ಮೂಲ ವೀಸಾ ದಾಖಲಾತಿ ಅರ್ಜಿಯನ್ನು 2006ರ ಜೂನ್ 30ರಂದು ಸಲ್ಲಿಸಿದ್ದು, ವ್ಯವಹಾರಕ್ಕೆ ಸಂಬಂಧಿಸಿದಂತೆ ಆತನಿಗೆ ವೀಸಾ ನೀಡಲಾಗಿತ್ತು. ಈ ದಾಖಲಾತಿಗಳನ್ನು ಶುಕ್ರವಾರ ಪತ್ತೆ ಮಾಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ